Breaking NewsLatestಜಿಲ್ಲಾ ಸುದ್ದಿರಾಜ್ಯವಿಜಯಪುರಸುದ್ದಿ

ಪಕ್ಷ ಬಿಡುವ ಕಾಂಗ್ರೆಸ್,ಬಿಜೆಪಿ ಶಾಸಕರ ಪಟ್ಟಿಗಳೆರಡೂ ನನ್ನ ಬಳಿ ಇದೆ: ಯತ್ನಾಳ್

ವಿಜಯಪುರ: ಕಾಂಗ್ರೆಸ್ ಹಾಗೂ ಬಿಜೆಪಿ ಬಿಡುವವರ ಪಟ್ಟಿ ತಮ್ಮ ಬಳಿ ಇದೆ. ಕಾಲ ಕಾಲಕ್ಕೆ ಅದನ್ನು ಬಹಿರಂಗಪಡಿಸುತ್ತೇನೆ ಎಂದು ಶಾಸಕ ಬಸವಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಆರು ತಿಂಗಳಲ್ಲಿ ಜಾದೂ ಹೇಗೆ ನಡೆಯುತ್ತದೆ ಎಂಬುದನ್ನು ನೋಡಿ. ಸಿದ್ದರಾಮಯ್ಯ ಕಾಂಗ್ರೆಸ್ ಬಿಟ್ಟರೂ ಅಚ್ಚರಿ ಇಲ್ಲ. ಸಿದ್ದರಾಮಯ್ಯ ಅವರನ್ನು ಮುಗಿಸುವುದೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೇಕೆದಾಟು ಪಾದಯಾತ್ರೆ ಉದ್ದೇಶ ಎಂದರು.

ದೇಶವನ್ನು ಸುದೀರ್ಘ ಕಾಲ ಆಳಿದ ಕಾಂಗ್ರೆಸ್ಸಿಗರು, ಮೇಕೆದಾಟು, ಆಲಮಟ್ಟಿಗಾಗಿ ಹೋರಾಟ ಮಾಡಲಿಲ್ಲ. ಕಾವೇರಿ ಜಲ ವಿವಾದ ಬಗೆ ಹರಿಸಲಿಲ್ಲ. ಅಧಿಕಾರ ಅನುಭವಿಸಿ ಲೂಟಿ ಮಾಡಿ ಮತ್ತೆ ಅಧಿಕಾರಕ್ಕಾಗಿ ಕಾಂಗ್ರೆಸ್ಸಿಗರು ಹೋರಾಟದ ನಾಟಕವಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಕಳೆದ ಮೂವತ್ತು ವರ್ಷದಲ್ಲಿ ಲೂಟಿ ಮಾಡಿದ ಹಣವನ್ನು ಲೆಕ್ಕಹಾಕಿ ರಾಜ್ಯಕ್ಕೆ ವಾಪಸ್ ನೀಡಿದರೇ ಎಲ್ಲಾ ನೀರಾವರಿ ಯೋಜನೆಗಳೂ ಪೂರ್ಣಗೊಳ್ಳುತ್ತವೆ ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button