Latestಜಿಲ್ಲಾ ಸುದ್ದಿಮೆಟ್ರೋರಾಜ್ಯಸುದ್ದಿ
ಕರ್ನಾಟಕ ಬಂದ್ ವಾಪಸ್ ಪಡೆಯುವಂತೆ ಗೃಹ ಸಚಿವರ ಮನವಿ

ಬೆಂಗಳೂರು : ಹೊಸ ವರ್ಷದ ಮುನ್ನಾ ದಿನವಾದ ಡಿ.31 ಕರ್ನಾಟಕ ಬಂದ್ ಗೆ ನೀಡಲಾಗಿರುವ ಕರೆಯನ್ನು ಹಿಂಪಡೆಯುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಕನ್ನಡ ಪರ ಸಂಘಟನೆಗಳಿಗೆ ಮನವಿ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಗುರುವಾರ ಮಾತಾನಾಡಿದ ಅವರು, ಕನ್ನಡ ವಿರೋಧಿ ಪುಂಡರನ್ನು ಈಗಾಗಲೇ ಬಂಧಿಸಿದ್ದು, ಕಠಿಣಕ್ರಮ ಜರುಗಿಸಲಾಗುತ್ತಿದೆ ಎಂದರು.
ಸಾಂಕ್ರಮಿಕ ಕೋವಿ ಡ್ ಕಾರಣದಿಂದ ಈಗಾಗಲೇ ಆರ್ಥಿಕವಾಗಿ ಜರ್ಝರಿತವಾಗಿ ಸಂಕಷ್ಟಕ್ಕೆ ಒಳಗಾಗಿರುವ ಮಹಾ ಜನತೆಗೆ, ಇನ್ನಷ್ಟು ಹೊರೆಯನ್ನು ಹೇರಲು ನಾವು ಕಾರಣವಾಗಬಾರದು ಎಂದು ಅವರು ಹೇಳಿದರು.
ಎಂ ಇ ಎಸ್ ಅನ್ನು ಈಗಾಗಲೇ ಬೆಳಗಾವಿ ನಗರದ ಜನತೆ ನಿಷೇಧಿಸಿದ್ದಾರೆ, ಹಾಗೂ ಸರಕಾರವು, ರಾಜ್ಯದ ಜಲ, ನೆಲ ಹಾಗೂ ನುಡಿಯ ರಕ್ಷಣೆಗೆ ಬದ್ದವಾಗಿದೆ, ಎಂದು ಸಚಿವರು ಹೇಳಿದರು.



