Breaking NewsLatestರಾಜ್ಯರಾಷ್ಟ್ರೀಯವಿದೇಶಸುದ್ದಿ

ಉಕ್ರೇನ್ ನಿಂದ ಭಾರತೀಯರನ್ನು ಸ್ವದೇಶಕ್ಕೆ ಕರೆ ತರಲು ಸರ್ಕಾರ ಹಗಲಿರುಳು ಶ್ರಮಿಸುತ್ತಿದೆ: ಪ್ರಧಾನಿ ಮೋದಿ

ನವದೆಹಲಿ: ಯುದ್ಧಪೀಡಿತ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಕರೆತರಲು ಸರ್ಕಾರ ಹಗಲಿರುಳು ಶ್ರಮಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಹಿಂದಿ ದೈನಿಕಕ್ಕೆ ನೀಡಿದ ಸಂದರ್ಶನದಲ್ಲಿ, ಯುದ‍್ಧದ ಪರಿಸ್ಥಿತಿಯಿಂದಾಗಿ ಭಾರತೀಯ ವಿದ್ಯಾರ್ಥಿಗಳು ಎದುರುಸುತ್ತಿರುವ ಕಷ್ಟಗಳ ಬಗ್ಗೆ ಸರ್ಕಾರಕ್ಕೆ ಅರಿವಿದೆ. ಪ್ರತಿಯೊಬ್ಬ ಭಾರತೀಯನು ಮನೆಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಯಾವುದೇ ಅವಕಾಶವನ್ನು ಬಿಡುತ್ತಿಲ್ಲ ಎಂದು ಅವರ ಹೇಳಿದರು.

ಹವಾಮಾನ ಪರಿಸ್ಥಿತಿಗಳು ನಮಗೆ ಹಲವೆಡೆ ಕಷ್ಟದಾಯಕವೆನಿಸಿದೆ ಎಂದು ಹೇಳಿರುವ ಪ್ರಧಾನಿ, ಹಲವಾರು ರಾಷ್ಟ್ರಗಳ ಮುಖ್ಯಸ್ಥರೊಂದಿಗೆ ವೈಯಕ್ತಿಕವಾಗಿ ಮಾತನಾಡಿದ್ದೇನೆ. ಈ ಕಾರ್ಯಾಚರಣೆಯಲ್ಲಿ ತೊಡಗಿರುವ ಎಲ್ಲಾ ಸಚಿವಾಲಯಗಳು ಸಂಪೂರ್ಣ ಸಮರ್ಪಣಾಭಾವದಿಂದ ಕೆಲಸ ಮಾಡುತ್ತಿವೆ ಎಂದರು. ಇದರಿಂದ ವಿದ್ಯಾರ್ಥಿಗಳು ಸ್ಥಳಾಂತರಗೊಂಡು ಮನೆಗೆ ಮರಳಿದಾಗ ಜನರ ಮುಖದಲ್ಲಿ ಸಂತಸ ಎದ್ದು ಕಾಣುತ್ತಿದೆ. ಅವರ ಪೋಷಕರು ನಿರಾಳರಾಗಿದ್ದಾರೆ ಎಂದು ಹೇಳಿದರು.

ಉಕ್ರೇನ್ ನೊಂದಿಗೆ ಗಡಿ ಹಂಚಿಕೊಳ್ಳುವ ದೇಶಗಳಲ್ಲಿ ಭಾರತೀಯರ ಒಡೆತನದ ಎನ್ ಜಿಓಗಲು ಮತ್ತು ಸಂಸ್ಥೆಗಳನ್ನು ಸರ್ಕಾರ ಸಜ್ಜುಗೊಳಿಸಿದೆ. ಯುದ್ಧ ಪ್ರಾರಂಭವಾಗುವ ಮೊದಲೇ ಭಾರತೀಯ ರಾಯಭಾರಿ ಕಚೇರಿ ವಿದ್ಯಾರ್ಥಿಗಳೊಂದಿಗೆ ಸಂಪರ್ಕದಲ್ಲಿತ್ತು ಮತ್ತು ಅವರಿಗೆ ನಿರಂತರವಾಗಿ ಮಾರ್ಗದರ್ಶನ ನೀಡುತ್ತಿದೆ ಎಂದು ತಿಳಿಸಿದರು.

ಯುದ್ಧದ ಮೊದಲು, ಭಾರತ ಮತ್ತು ಉಕ್ರೇನ್ ನಡುವಿನ ವಿಮಾನಗಲ ಸಂಖ್ಯೆ ಮೇಲೆ ಮಿತಿ ಇತ್ತು. ಆದರೆ, ಭಾರತ ಸರ್ಕಾರ ಉಕ್ರೇನ್ ಅಧಿಕಾರಿಗಳೊಂದಿಗೆ ಮಾತನಾಡಿ ನಿರ್ಬಂಧಗಳನ್ನು ಸಡಿಲಿಸಿತು. ಆದ್ದರಿಂದ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಬಹುದು ಎಂದೂ ಪ್ರಧಾನಿ ಮೋದಿ ಹೇಳಿದರು.

12 ಸಾವಿರ ವಿದ್ಯಾರ್ಥಿಗಳ ಸ್ಥಳಾಂತರ

ನಮ್ಮ ಪ್ರಯತ್ನದ ಫಲವಾಗಿ ಉಕ್ರೇನ್ ನಿಂದ ಸುಮಾರು 12 ಸಾವಿರ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಸಾಧ್ಯವಾಯಿತು ಎಂದರು.

30 ದಿನದಲ್ಲಿ 30 ವಿಮಾನಗಳು

ನಿಯಮಿತ ವಿಮಾನಗಳ ಜತೆ, ಭಾರತೀಯ ವಾಯುಪಡೆಯನ್ನು ಸ್ಥಳಾಂತರ ಕಾರ್ಯಕ್ಕೆ ಸಂಪರ್ಕಿಸಿದ್ದೇವೆ. ಮುಂದಿನ 30 ದಿನಗಳ ಕಾಲ ಒಟ್ಟು 30 ವಿಮಾನಗಳು ಉಕ್ರೇನ್ ನಿಂದ ಭಾರತೀಯರನ್ನು ಕರೆತರಲಿವೆ ಎಂದು ಅವರು ಹೇಳಿದರು.

Spread the love

Related Articles

Leave a Reply

Your email address will not be published. Required fields are marked *

Back to top button