Breaking NewsLatestಜಿಲ್ಲಾ ಸುದ್ದಿರಾಜಕೀಯರಾಜ್ಯಸುದ್ದಿಹುಬ್ಬಳ್ಳಿ - ಧಾರವಾಡ

ಮುಖ್ಯಮಂತ್ರಿಗಳು ಸಮಾಜಕ್ಕೆ ಕೊಟ್ಟ ಮಾತು ಉಳಿಸಿಕೊಳ್ಳಬೇಕು: ವಿಜಯಾನಂದ‌ ಕಾಶಪ್ಪನವರ್

ಹುಬ್ಬಳ್ಳಿ : ಪಂಚಮಸಾಲಿ ಸಮಾಜದ 2 ಎ ಮೀಸಲಾತಿಗಾಗಿ ಈಗಾಗಲೇ ಸಾಕಷ್ಟು ಹೋರಾಟಗಳನ್ನು ಸಮಾಜದ ಎಲ್ಲರೂ ಮಾಡುತ್ತಾ ಬಂದಿದ್ದಾರೆ. ಸಮುದಾಯದ ಎಲ್ಲರಿಗೂ ಶೇ. 99 ರಷ್ಟು ಮೀಸಲಾತಿ ಸಿಗುತ್ತೆ ಎನ್ನುವ ಭರವಸೆ ಇದೆ. ಅದೇ ರೀತಿ ಮುಖ್ಯಮತ್ರಿಗಳು ಸಮಾಜಕ್ಕೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂದು ಮಾಜಿ ಶಾಸಕ ವಿಜಯನಂದ ಕಾಶಪ್ಪನವರ್ ಅಗ್ರಹಿಸಿದರು.

ನಗರದ ಚೆನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ನಾವೂ 99 ಮೆಟ್ಟಿಲು ಏರಿದ್ದೇವೆ, ಇನ್ನೊಂದು ಮೆಟ್ಟಿಲು ಮಾತ್ರ ಬಾಕಿ‌ ಇದೆ. ಸಿಎಂ ಬೊಮ್ಮಾಯಿಯವರು ಮೀಸಲಾತಿ ನೀಡಿದ್ರೆ ಅವರಿಗೂ ಗೌರವ, ನಮಗೂ ಗೌರವ. ಸಿಎಂ‌ ಬೊಮ್ಮಾಯಿಯವರು ಸಮಾಜಕ್ಕೆ ಕೊಟ್ಟ ಮಾತು ಉಳಿಸಿಕೊಳ್ಳಬೇಕು ಎಂಬ ಒತ್ತಾಯ ಮಾಡಿದರು.

ಸದನದಲ್ಲಿ ನಮಗೆ ಸರಿಯಾದ ಉತ್ತರ ಸಿಕ್ಕಿಲ್ಲ, ಸ್ಪಷ್ಟವಾದ ನಿರ್ಣಯ ಬಂದಿಲ್ಲ. ಹೋರಾಟ ಬೆಂಗಳೂರು ತಲುಪುವ ಮುನ್ನ ಸರ್ಕಾರದಿಂದ ಸ್ಪಷ್ಟ ಉತ್ತರ ದೊರೆಯಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಸರ್ಕಾರ ಕೊಟ್ಟ ಮಾತಿನಂತೆ ನಡೆಯದಿದ್ದರೇ ರಾಜ್ಯದಲ್ಲಿ ದೊಡ್ಡ ಕ್ರಾಂತಿಯೇ ಆಗಲಿದೆ ಎಂದು ಎಚ್ಚರಿಕೆ ನೀಡಿದರು.

ಸಿಎಂ‌ ನಮ್ಮ ಸಮಾಜಕ್ಕೆ ನ್ಯಾಯ ಕೊಡುವ ಭರವಸೆ ಇದೆ: ಬೆಲ್ಲದ:

ವೀರಶೈವ ಲಿಂಗಾಯತ ಸಮಾಜವನ್ನು 2 ಮೀಸಲಾತಿಗೆ ಸೇರಿಸಬೇಕು ಎಂದು ಹೋರಾಟಗಳು ನಡೆಯುತ್ತಾ ಬಂದಿದೆ. ಜೊತೆಗೆ ಮರಾಠ ಸಮಾಜ ಹಾಗೂ ಕುರುಬ ಸಮಾಜದ ಭಾಂಧವರು ತಮ್ಮ ಸಮಾಜದ ಬೇಡಿಕೆ ಕುರಿತು ಹೋರಾಟ ಮಾಡಿ ಮನವಿ ನೀಡಿದ್ದಾರೆ. ಇದರ ಕುರಿತು ನಾವು ಕಳಪೆ ದ ದಿನ ಸದನದಲ್ಲಿ ಹೋರಾಟ ಮಾಡಿದ್ದೇವೆ. ಆದಷ್ಟು ಬೇಗ ಹಿಂದುಳಿದ ಆಯೋಗ ಬೇಗ ತೀರ್ಮಾಣ ಮಾಡಬೇಕು ಎಂದು ಶಾಸಕ ಅರವಿಂದ ಬೆಲ್ಲದ ಒತ್ತಾಯ ಮಾಡಿದರು. ‌

ಹುಬ್ಬಳ್ಳಿಯ ಪಂಚಮಸಾಲಿ 2ಮೀಸಲಾತಿ ಹೋರಾಟ ನೇತೃತ್ವವಹಿಸಿಕೊಂಡಿರುವ ಕೂಡಲ ಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಭೇಟಿಯಾಗಿ ಮಾತನಾಡುದ ಅವರು, ನಾನು ಬಸವನಗೌಡ ಪಾಟೀಲ ಯತ್ನಾಳ ಸದನದ ಬಾವಿಯೊಳಗೆ ಇಳಿದು ಹೋರಾಟ ಮಾಡಿದ್ದೇವೆ. ನಮ್ಮ ಹೋರಾಟದ ವೇಳೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಸಿಎಂ ನಮಗೆ ನ್ಯಾಯ ಕೊಡುತ್ತಾರೆ ಅನ್ನೋ ನಂಬಿಕೆ ಇದೆ ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button