Breaking NewsLatestಜಿಲ್ಲಾ ಸುದ್ದಿರಾಜಕೀಯರಾಮನಗರ

ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಮಾಜಿ ಶಾಸಕ ಕೆ. ರಾಜು ವಾಗ್ದಾಳಿ

ರಾಮನಗರ: ನಾನು ರಾಜಕೀಯಕ್ಕೆ ಬಂದಾಗ ಕುಮಾರಸ್ವಾಮಿ ಎಲ್ಲಿದ್ದರೋ ಗೊತ್ತಿಲ್ಲ. ಸಾತನೂರಿನಲ್ಲಿ ಹೀನಾಯವಾಗಿ ಸೋತಿದ್ದ ಅವರನ್ನು ಪಕ್ಷವನ್ನ ಬೆಳೆಸುವ ದೃಷ್ಠಿಯಿಂದ ರಾಮನಗರಕ್ಕೆ ಕರೆತಂದೆವು. ಅವರನ್ನ ಕರೆತಂದಿದ್ದಕ್ಕೆ ಸಾಕಷ್ಟು ಪರಿಣಾಮ ಎದುರಿಸಿದ್ದೇವೆ. ಹಿರಿಯ ನಾಯಕರ ಸಮಾಧಿ ಸೌಧ ಕಟ್ಟಿಕೊಂಡಿದ್ದಾರೆ ಎಂದು ಮಾಜಿ ಶಾಸಕ ಕೆ. ರಾಜು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದರು.


ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನನ್ನ ವಿರುದ್ಧ ಕುಮಾರಸ್ವಾಮಿ ಇಲ್ಲಸಲ್ಲದ ಮಾತನಾಡುತ್ತಿದ್ದಾರೆ. ದೇವೇಗೌಡರ ಮಗ ಎನ್ನುವ ಕಾರಣಕ್ಕೆ ಜನ ಅವರನ್ನು ಗುರುತಿಸಿದ್ರು.ರಾಮನಗರದಲ್ಲಿ ಒಬ್ಬರ ಮೇಲೆ ಒಬ್ಬರನ್ನ ಎತ್ತಿಕಟ್ಟಿ ಯಶ್ವಸ್ವಿಯಾದರೂ, ನನಗೆ ಜಿಲ್ಲಾ ಪಂಚಾಯತ್ ಗೆ ಟಿಕೆಟ್ ನೀಡಿ ಸೋಲಿಸಲು ಹೇಳಿದ್ದರು. ಅವರು ಹೇಳಿದಂತೆ ಕೇಳುವವರನ್ನ ಮಾತ್ರ ರಾಜಕೀಯವಾಗಿ ಬೆಳೆಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ನಾನು ಎಂದು ಎಂದೂ ಎಮ್ ಎಲ್ ಎ ಟಿಕೇಟ್ ಕೇಳಿರಲಿಲ್ಲ. ಅವರ ಮನೆಯಲ್ಲಿ ಇದ್ದ ಗೊಂದಲ, ರೇವಣ್ಣ ಅವರ ಪತ್ನಿ ಭವಾನಿ ಅವರಿಗೆ ಬಿ ಫಾರಂ ಕೊಟ್ಟಿದ್ದಾರೆ ಎಂದು ಅವರ ಮನೆಯವರೇ ನನ್ನ ಹುರಿದುಂಬಿಸಿ ಚುನಾವಣೆಗೆ ನಿಲ್ಲಿಸಿದರು. ನಾನು ಉಪಚುನಾವಣೆಯಲ್ಲಿ ಗೆದ್ದ ನಂತರ ಸಾಕಷ್ಟು ಅಪಮಾನ ಮಾಡಿದರು. ಉಪಚುನಾವಣೆಯಲ್ಲಿ ನನ್ನನ್ನ ಅವರು ಗೆಲ್ಲಿಸಿದ್ದೇ ಆಗಿದ್ದರೇ ಚನ್ನಪಟ್ಟಣದಲ್ಲಿ ಅವರ ಪತ್ನಿಯನ್ನ ಯಾಕೆ ಗೆಲ್ಲಿಸಲು ಸಾಧ್ಯವಾಗಲಿಲ್ಲವೆಂದರು.


ಕಾಂಗ್ರೆಸ್ ಪಕ್ಷದ ಬೆಂಬಲದಿಂದ ಎರಡನೇ ಬಾರಿ ಹೆಚ್ಡಿಕೆ ಸಿಎಂ ಆದರೂ ಆಮೇಲೆ ಹಣ ಮಾಡುವ ದಂಧೆಗೆ ಇಳಿದರು. ನೂರಾರು ಕೋಟಿ ಖರ್ಚು ಮಾಡಿದರೂ ಕೂಡ ಮಂಡ್ಯದಲ್ಲಿ ಅವರ ಮಗನನ್ನ ಗೆಲ್ಲಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮಾಜಿ ಪ್ರಧಾನಿ ದೇವೇಗೌಡರು ಸೋಲಲು ಕಾರಣ ಕುಮಾರಸ್ವಾಮಿ ಅವರೇ. ಅವರ ಆಕ್ರಮ ನೋಡಿ ಜನರು ಸೋಲಿಸಿದರು ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button