Breaking NewsLatestಜಿಲ್ಲಾ ಸುದ್ದಿಬೆಂಗಳೂರು ಗ್ರಾಮಾಂತರ
ಅಗ್ನಿಶಾಮಕ ಠಾಣೆಯ ಮುಂಭಾಗದಲ್ಲೇ ಹಣ್ಣಿನ ವಾಹನಕ್ಕೆ ಬೆಂಕಿ

ದೇವನಹಳ್ಳಿ: ನಗರದ ಅಗ್ನಿಶಾಮಕ ಠಾಣೆಯ ಎದುರು ರಾತ್ರಿ ದೇವನಹಳ್ಳಿ ನಿವಾಸಿಯಾಗಿರುವ ಬೀದಿಬದಿ ವ್ಯಾಪಾರಿ ನೂರುಲ್ಲಾ ಎಂಬುವರ ಟಾಟಾ ಎಸಿ ವಾಹನಕ್ಕೆ ಬೆಂಕಿ ತಗುಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನ ಸೇರಿದಂತೆ ಹಣ್ಣುಗಳೆಲ್ಲ ಸಂಪೂರ್ಣ ಕರಕಲಾಗಿ ಸುಟ್ಟು ಹೋಗಿದೆ.
ಮಧ್ಯರಾತ್ರಿ 1ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ದುರುದ್ದೇಶದಿಂದ ಯಾರೋ ಬೆಂಕಿ ಹಚ್ಚಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಕಳೆದ ಎಂಟು ವರ್ಷಗಳಿಂದ ಹಣ್ಣಿನ ವ್ಯಾಪಾರ ಮಾಡಿಕೊಂಡು ಬರುತ್ತಿದ್ದು ನನಗೆ ಯಾರ ಮೇಲು ಅನುಮಾನವಿಲ್ಲ ರಾತ್ರಿ ಬೆಂಕಿಬಿದ್ದಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ. ಸುಮಾರು 3 ಲಕ್ಷ ರೂ.ಗಳ ವರೆಗೆ ನಷ್ಟ ಉಂಟಾಗಿದೆ. ಇದೀಗ ತನಿಖೆ ಮಾಡಿ ನ್ಯಾಯ ಕೊಡಿಸಿ ಎಂದು ಪೊಲೀಸರಿಗೆ ಮನವಿ ಮಾಡಿರುವೆ ಎಂದು ವ್ಯಾಪಾರಿ ಹೇಳಿದ್ದಾರೆ.
