Breaking NewsLatestಬಾಲಿವುಡ್ಮನರಂಜನೆಸಿನಿಮಾಸೆಲೆಬ್ರಿಟಿ

ನಟ ಸೋನು ಸೂದ್​ ಮೇಲೆ FIR ದಾಖಲು

ಕೋವಿಡ್ ಸಂದರ್ಭದಲ್ಲಿ ಲಕ್ಷಾಂತರ ಮಂದಿಯ ನೋವಿಗೆ ಸ್ಪಂದಿಸಿದ್ದ ನಟ ಸೋನು ಸೂದ್ ಮೇಲೆ ಎಫ್​ಐಆರ್ ದಾಖಲಾಗಿದೆ. ಇಷ್ಟು ದಿನ ಸೋನು ಸೂದ್​ರನ್ನ ಹಾಡಿ ಹೊಗಳುತ್ತಿದ್ದ ಕೆಲ ಪಕ್ಷದ ಸದಸ್ಯರು ಹಾಗೂ ಕಾರ್ಯಕರ್ತರು ಇದೀಗ ಸೋನು ವಿರುದ್ಧ ತಿರುಗಿ ಬಿದಿದ್ದಾರೆ.

ನಟ ಸೋನು ಸೂದ್​ರ ಸಹೋದರಿ ಮಾಳವಿಕಾ ಸೂದ್ ಪಂಜಾಬ್​ನ ಮೋಗಾ ವಿಧಾನಸಭೆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಸೋನು ಸೂದ್ ಸಹೋದರಿ ಪರವಾಗಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದರು. ಮತದಾನದ ದಿನ ಮತಗಟ್ಟೆಗೆ ಭೇಟಿ ನೀಡಿದ ಸೋನು ಸೂದ್​ರ ವಾಹವನ್ನ ತಡೆದು ಕಾರು ಪಶಪಡಿಸಿಕೊಂಡು ಬಲವಂತದಿಂದ ಮನೆಗೆ ಕಳುಹಿಸಲಾಗಿತ್ತು. ಇದರ ಬೆನ್ನಲ್ಲೆ ಇದೀಗ ಸೋನು ಸೂದ್ ಮೇಲೆ ಎಫ್​ಐಆರ್ ದಾಖಲಿಸಲಾಗಿದೆ.

ಮತದಾನದ ದಿನ ತನ್ನ ಸಹೋದರಿಗೆ ಮತ ಚಲಾಯಿಸುವಂತೆ ಮತದಾರರ ಮೇಲೆ ಪ್ರಭಾವ ಬೀರಿದ ಆರೋಪದ ಹಿನ್ನೆಲೆ ನಟ ಸೋನು ಸೂದ್ ಮೇಲೆ ಎಫ್​ಐಆರ್ ದಾಖಲಿಸಲಾಗಿದೆ. ಸೋನು ಸೂದ್ ಮೇಗಾ ಕ್ಷೇತ್ರದ ಲಂಡೆಕೆ ಗ್ರಾಮದಲ್ಲಿ ಮತದಾನದ ದಿನ ಪ್ರಚಾರ ಮಾಡಿದ್ದಾರೆ ಎಂಬ ಆರೋಪದ ಮೇಲೆ ಎಫ್​ಐಆರ್ ದಾಖಲಿಸಲಾಗಿದೆ.

ತಾರಾ ಪ್ರಚಾರಕರು ಬಹಿರಂಗ ಪ್ರಚಾರ ಮುಗಿದ ದಿನವೇ ಕ್ಷೇತ್ರ ಬಿಟ್ಟು ತೆರಳಬೇಕು. ಒಂದೊಮ್ಮೆ ಅದೇ ಕ್ಷೇತ್ರದಲ್ಲಿದ್ದರೆ ಮತಯಾಚನೆ ಮಾಡಬಾರದು ಎಂಬ ನಿಯಮವಿದೆ. ಆದರೆ ಮತದಾನದ ದಿನದಂದು ಸೋನು ಸೂದ್ ತಮ್ಮ ಸಹೋದರಿ ಪರವಾಗಿ ಮತ ಯಾಚನೆ ಮಾಡಿದ್ದಾರೆ ಎಂದು ಚುನಾವಣಾ ಅಧಿಕಾರಿ ಆರೋಪಿಸಿ ಮೋಗಾದ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button