Latestಇತರ ಕ್ರೀಡೆಕೊಡಗುಕ್ರೀಡೆ

FIBA Asia Cup ಮಹಿಳಾ ಬಾಸ್ಕೆಟ್ ಬಾಲ್ ಟೂರ್ನಿ; ಕೊಡಗಿನ ಪಟ್ಟೆಮನೆ ನವನೀತ ಭಾರತ ತಂಡಕ್ಕೆ ಆಯ್ಕೆ

ಕೊಡಗು : FIBA ಏಷ್ಯಾ ಕಪ್ ಬಾಸ್ಕೆಟ್‌ಬಾಲ್ ಟೂರ್ನಿಗೆ ಕೊಡಗಿನ ಪಟ್ಟೆಮನೆ ನವನೀತ ಅವರು ಆಯ್ಕೆ ಆಗಿದ್ದಾರೆ. ಇವರು ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಸುಂಟಿಕೊಪ್ಪ ಗದ್ದೆಹಳ್ಳದ ಕೃಷಿಕರಾಗಿರುವ ಪಟ್ಟೆಮನೆ ಉದಯಕುಮಾರ್ ಮತ್ತು ಗಿರಿಜ ದಂಪತಿಯ ಪುತ್ರಿ ಯಾಗಿದ್ದಾರೆ.

ಏಕಲವ್ಯ ಪ್ರಶಸ್ತಿ ಪುರಸ್ಕೃತೆ ಪಟ್ಟೆಮನೆ ಯು. ನವನೀತಾ ಅವರೇ ಫಿಬಾ ಏಷ್ಯಾ ಕಪ್ ಮಹಿಳಾ ಬಾಸ್ಕೆಟ್ ಬಾಲ್ ಟೂರ್ನಿಯ ಭಾರತ ತಂಡದಲ್ಲಿ ಸ್ಥಾನ ಪಡೆದವರಾಗಿದ್ದಾರೆ.

ಈ ತಿಂಗಳ 27 ರಿಂದ ಅಕ್ಟೋಬರ್ 30 ರವರೆಗೆ ಜೋರ್ಡಾನ್ ನ ಅಮ್ಮಾನ್ ನಲ್ಲಿ ಫಿಭಾ ಎಷ್ಯಾ ಕಪ್ ಬಾಸ್ಕೇಟ್ ಬಾಲ್ ಟೂರ್ನಮೆಂಟ್ ನಡೆಯಲಿದೆ.

ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತ ಮಹಿಳಾ ಹಾಕಿ ತಂಡದ ಸಹಾಯಕ ಕೋಚ್ ಆಗಿ ಸುಂಟಿಕೊಪ್ಪ ಕಂಬಿಬಾಣೆಯ ಅಂಕಿತಾ ಸುರೇಶ್ ಅವರು ಕಾರ್ಯ ನಿರ್ವಹಿಸಿ ದೇಶದ ಗಮನ ಸೆಳೆದಿದ್ದರು. ಇದೀಗ ಸುಂಟಿಕೊಪ್ಪದ ಬಾಸ್ಕೆಟ್ ಬಾಲ್ ಆಟಗಾರ್ತಿಯೊಬ್ಬರು ಫಿಬಾ ಏಷ್ಯಾಕಪ್ ಮಹಿಳಾ ಬಾಸ್ಕೆಟ್ ಬಾಲ್ ಟೂರ್ನಿಯ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಮೂಲಕ ಕೊಡಗಿನ ಹಿರಿಮೆ ಹೆಚ್ಚಿಸಿದ್ದಾರೆ.

FIBA Asia Cup ಮಹಿಳಾ ಬಾಸ್ಕೆಟ್ ಬಾಲ್ ಟೂರ್ನಿ ಸೆಪ್ಟೆಂಬರ್‌ 27 ರಂದು ನಡೆಯುವ ಮೊದಲ ಹಣಾಹಣಿಯಲ್ಲಿ ಭಾರತೀಯ ತಂಡವು ಜಪಾನ್ ಎದುರು ಹಾಗೂ ಸೆಪ್ಟೆಂಬರ್ 29 ರಂದು ನ್ಯೂಜಿಲ್ಯಾಂಡ್ ತಂಡದ ವಿರುದ್ಧ ಸೆಣಸಾಡಲಿದೆ.

Spread the love

Related Articles

Leave a Reply

Your email address will not be published. Required fields are marked *

Back to top button