Breaking NewsLatestಪರಿಸರವಿದೇಶ

ಈಜಿಪ್ತ್ ಮರಳುಗಾಡಿನಲ್ಲಿ ಉಭಯವಾಸಿ ತಿಮಿಂಗಿಲದ ಪಳೆಯುಳಿಕೆ ಪತ್ತೆ!

ಕೈರೋ: ವಿಶ್ವದ ಅತೀ ಪ್ರಾಚೀನ ಕಾಲದಲ್ಲಿ ತಿಮಿಂಗಿಲದ ಪಳೆಯುಳಿಕೆ ಈಜಿಪ್ತಿನ ಪಶ್ಚಿಮ ಭಾಗದ ಮರಳುಗಾಡಿನಲ್ಲಿ ಕಳೆದ 10 ವರ್ಷಗಳ ಹಿಂದೆ ಪತ್ತೆ ಮಾಡಲಾಗಿದ್ದು, ಇದು ನೆಲದ ಮೇಲೆ ಮತ್ತು ಜಲದಲ್ಲಿ ಚಲಿಸುತ್ತಾ ಎರಡೂ ಕಡೆ ಸಿಗುವ ಜೀವಿಗಳನ್ನು ಬೇಟೆಯಾಡುತ್ತಿತ್ತು ಎಂಬ ಕುತೂಹಲಕಾರಿ ಅಂಶವನ್ನು ಈಜಿಪ್ತ್ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.

ಪ್ರಾಚೀನ ಕಾಲದಲ್ಲಿ ಸಮುದ್ರದ ಭಾಗ ಮತ್ತು ಪಕ್ಕದಲ್ಲಿ ಮರುಭೂಮಿಯುಳ್ಳ, ತಿಮಿಂಗಿಲಗಳ ಕಣಿವೆ ಎಂದು ಪ್ರಸಿದ್ಧಿಯಿರುವ ಪ್ರವಾಸಿ ತಾಣ ಪ್ರದೇಶದಲ್ಲಿ ಕಳೆದ 2008ರಲ್ಲಿ ಪರಿಸರಪ್ರೇಮಿಗಳು ಈ ವಿಚಿತ್ರ ಪ್ರಭೇದದ ತಿಮಿಂಗಿಲದ ಪಳೆಯುಳಿಕೆ ಪತ್ತೆಹಚ್ಚಿದ್ದರು. 2017ರಲ್ಲಿ ಪರಿಣತಿ ಹೊಂದಿದ ತಜ್ಞ ವಿಜ್ಞಾನಿಗಳ ತಂಡವನ್ನು ರಚಿಸಿ ವಿಸ್ತೃತ ಸಂಶೋಧನೆ ಆರಂಭಿಸಿದ ನಂತರ ಇದು ತಿಮಿಂಗಿಲಗಳಲ್ಲಿ ವಿಭಿನ್ನವಾದ ತಳಿ ಎಂಬುದು ದೃಢವಾಯಿತು.

ಈ ಬಗ್ಗೆ ಅಧಿಕೃತ ಮಾಹಿತಿ ನೀಡಿರುವ ವಿಜ್ಞಾನಿಗಳು ಇದನ್ನು ಪ್ರಾಚೀನ ಕಾಲದ ಸಾವಿನ ದೇವತೆಯ ಸ್ಮರಣೆಗಾಗಿ ಫಿಯೋಮಿಸೆಟಸ್ ಅನೂಬಿಸ್ ಎಂದು ಹೆಸರಿಟ್ಟಿದ್ದಾರೆ ಇದು 43 ಮಿಲಿಯನ್ ವರ್ಷಗಳ ಹಿಂದೆಯಿದ್ದ ತಿಮಿಂಗಿಲದ ಪಳೆಯುಳಿಕೆಯು ಪ್ರೊಟೊಸಿಟಿಡಾಯ್ ಎನ್ನುವ ವಿಶಿಷ್ಟ ಉಭಯವಾಸಿ ಪ್ರಭೇದದ್ದು.

ನಾಲ್ಕು ಕಾಲುಗಳನ್ನು, ಬಲಿಷ್ಠ ದಂತಗಳನ್ನು ಹೊಂದಿದ್ದ ವಿಚಿತ್ರ ತಿಮಿಂಗಿಲ. ನೀರಿನಲ್ಲಿ ಸಿಗುವ ಜಲಚರಗಳನ್ನು ಹೆಚ್ಚು ಬೇಟೆಯಾಡುತ್ತಿದ್ದವು. ಅಲ್ಲದೆ ಭೂಮಿಮೇಲೆಯೂ ಓಡಾಡುತ್ತಾ ಪ್ರಾಣಿಗಳನ್ನೂ ತಮ್ಮ ಆಹಾರವಾಗಿಸಿದ್ದವು ಎಂದು ವಿಜ್ಞಾನಿಗಳ ತಂಡದ ಮುಖ್ಯಸ್ಥ, ಜೀವಶಾಸ್ತ್ರಜ್ಞ ಹೆಶಾಮ್ ಸಲೇಂ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button