Latestಅಂಕಣಗಳುರಾಷ್ಟ್ರೀಯ

ವಿರಾಟ್ ರೂಪ ಪಡೆಯುತ್ತಿರುವ ರೈತರ ಹೋರಾಟ

ಚಳುವಳಿಗಳನ್ನು ಲೆಕ್ಕಿಸದೆ ನಿರ್ಲಕ್ಷಿಸಿದಾಗ ದಿನ ಕಳೆದಂತೆ ಅದರ ಶಕ್ತಿ ಕುಂದಬಹುದು ಎಂಬ ಪ್ರಭುತ್ವದ ಲೆಕ್ಕಾಚಾರ ಈಗ ತಲೆಕೆಳಗಾಗಿದೆ. ರೈತರ ಆಂದೋಲನವು ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ವಿಚಾರವಾಗಿ ಉಳಿದಿಲ್ಲ. ಮೋದಿ ಸರ್ಕಾರದ ಒಟ್ಟಾರೆ ನೀತಿಗಳಿಂದಾಗಿ ವಿವಿಧ ಕ್ಷೇತ್ರಗಳಲ್ಲಿ ತೊಂದರೆ ಅನುಭವಿಸಿದ ಹಲವು ವಿಚಾರಗಳು ಇದರಲ್ಲಿ ಸೇರಿಕೊಂಡು ಅನ್ನದಾತರ ಪ್ರತಿಭಟನೆ ವಿರಾಟ್ ರೂಪವನ್ನೇ ಪಡೆದಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಎಂ ಹೈದರ್

ಳುವಳಿಗಳನ್ನು ಲೆಕ್ಕಿಸದೆ ನಿರ್ಲಕ್ಷಿಸಿದಾಗ ದಿನ ಕಳೆದಂತೆ ಅದರ ಶಕ್ತಿ ಕುಂದಬಹುದು ಎಂಬ ಪ್ರಭುತ್ವದ ಲೆಕ್ಕಾಚಾರ ಈಗ ತಲೆಕೆಳಗಾಗಿದೆ.

ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ ಒಂಬತ್ತು ತಿಂಗಳ ಹಿಂದೆ ಪ್ರಾರಂಭವಾದ ರೈತರ ಪ್ರತಿಭಟನೆ ಭಾನುವಾರ ಉತ್ತರ ಪ್ರದೇಶದ ಮುಜಫರ್ ನಗರದಲ್ಲಿ ಐದು ಲಕ್ಷಕ್ಕೂ ಅಧಿಕ ರೈತರು ಪಾಲ್ಗೊಳ್ಳುವ ಮೂಲಕ ಹೊಸ ಇತಿಹಾಸವನ್ನೇ ಬರೆದಿದೆ.

ಮೋದಿ ಸರ್ಕಾರದ ನೀತಿಯ ವಿರುದ್ಧ ಇಷ್ಟು ದೊಡ್ಡ ಪ್ರಮಾಣದಲ್ಲಿ ಅನ್ನದಾತರ ಪ್ರತಿರೋಧ ನಡೆಯುತ್ತಿದ್ದರೂ ಮೋದಿ ಭಕ್ತ ಬಹುತೇಕ ಮೀಡಿಯಾಗಳು ಇದನ್ನು ಪ್ರಸಾರ ಮಾಡಲಿಲ್ಲ ಪ್ರಜಾಪ್ರಭುತ್ವ ನಾಲ್ಕನೇ ಅಂಗ ಎಂದು ವ್ಯಾಖ್ಯಾನಿಸಲಾಗುವ ಮಾಧ್ಯಮಗಳು ತನ್ನ ಕರ್ತವ್ಯವನ್ನು ನಿಭಾಯಿಸದೆ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ದಾಖಲಾಗಲು ಕಾರಣವಾದವು.

ಪಶ್ಚಿಮ ಉತ್ತರ ಪ್ರದೇಶದಲ್ಲಿ ಆಯೋಜನೆಗೊಂಡ ಈ ಬೃಹತ್ ರೈತ ಸಮಾಗಮದಲ್ಲಿ ದೇಶದಾದ್ಯಂತದಿಂದ ಸುಮಾರು ಐದು ಲಕ್ಷಕ್ಕೂ ಅಧಿಕ ರೈತರು ಬಂದು ಪಾಲ್ಗೊಂಡು ಸುಮಾರು 300ಕ್ಕೂ ಹೆಚ್ಚು ಸಂಘಟನೆಗಳು ಇದಕ್ಕೆ ಬೆಂಬಲವಾಗಿ ನಿಂತಿದ್ದವು. ಇದನ್ನು ಮೋದಿ ಭಕ್ತ ಮಾಧ್ಯಮಗಳು ಹೊರಗಿನಿಂದ ಬಂದ ಜನ ಎಂದು ಕೂಡ ಪ್ರಸಾರ ಮಾಡಿದರೆ ಇನ್ನುಳಿದವು ಸುದ್ದಿಯನ್ನು ಬಿತ್ತರಿಸದೆ ಅಥವಾ ಪ್ರಕಟಿಸದೆ ಎಂದಿನಂತೆ ತಮ್ಮ ದಳ್ಳಾಳಿತನದ ನಿಷ್ಠೆ ಮೆರೆಯಲು ಹರಸಾಹಸಪಟ್ಟವು.

ಕಾರ್ಪೊರೇಟ್ ಗಳ ಲಗಾಮಿನಲ್ಲಿ ಬದುಕುವ ಇಂತಹ ಪತನಗೊಂಡ ಮಾಧ್ಯಮಗಳ ನಡುವೆಯೂ ಕೆಲವು ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳು ಇದನ್ನು ದೇಶದಾದ್ಯಂತ ತಲುಪಲು ಶ್ರಮಿಸಿದವು. ಅಂತೆಯೇ ರೈತರ ಇಷ್ಟು ಬೃಹತ್‌ ಪ್ರಮಾಣದ ಪ್ರತಿಭಟನೆಯನ್ನು ಕಂಡು ಪ್ರಭುತ್ವದ ಮೂಳೆಯಾಳದಲ್ಲಿ ನಡುಕ ಉಂಟಾಗಿರುವುದಂತು ದಿಟ.

ಉತ್ತರ ಪ್ರದೇಶದ ಮುಜಫರ್ ನಗರ ರಾಜಕೀಯದ ಪಿತೂರಿಗೆ ತುತ್ತಾಗಿ ಇಲ್ಲಿ ಹಲವು ಕೋಮು ಹಿಂಸಾಚಾರಗಳು ನಡೆದಿದೆ, ಚುನಾವಣೆ ಗೆಲ್ಲಲು ಹಿಂದೂ ಮತ್ತು ಮುಸ್ಲಿಮರಲ್ಲಿ ಪರಸ್ಪರ ದ್ವೇಷ ಉಂಟುಮಾಡಿ ಇಲ್ಲಿ ರಾಜಕೀಯ ಫಸಲನ್ನು ಪಡೆಯಲು ಎಲ್ಲ ರಾಜಕೀಯ ಪಕ್ಷಗಳು ಟೊಂಕಕಟ್ಟಿ ನಿಲ್ಲುತ್ತವೆ ಇಂತಹ ಮುಜಫರ್ ನಗರದಲ್ಲಿ ನಿನ್ನೆ ನಡೆದ ರೈತ ಮಹಾ ಪಂಚಾಯತ್ ನಲ್ಲಿ ಜಾತಿ ಮತ ಭೇದ ವಿಲ್ಲದೆ ಕೇಂದ್ರ ಸರ್ಕಾರದ ವಿರುದ್ಧ ಐದು ಲಕ್ಷಕ್ಕೂ ಅಧಿಕ ರೈತರು ಜೊತೆಯಾಗಿ ಒಂದು ರೈತ ಸಮುದಾಯವಾಗಿ ಪ್ರಭುತ್ವಕ್ಕೆ ನಡುಕ ಹುಟ್ಟಿಸಿರುವುದು ಪ್ರಜಾಪ್ರಭುತ್ವದ ಆಶಾದಾಯಕ ಬೆಳೆವಣಿಗೆ.

ಓಟಿಗಾಗಿ ಹಿಂದು ಮುಸ್ಲಿಮರ ಮಧ್ಯೆ ದ್ವೇಷ ಉಂಟುಮಾಡಿ ಮುರಿಯುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ನಾವು ಕಟ್ಟುವ ಕೆಲಸ ಮಾಡುತ್ತಿದ್ದೇವೆ. ಇನ್ನು ದ್ವೇಷದ ರಾಜಕೀಯ ಲಾಭಕೋರತನಕ್ಕೆ ದೇಶದಲ್ಲಿ ಜಾಗವಿಲ್ಲ ಮೋದಿ ಸರ್ಕಾರ ಅಂಬಾನಿ ಮತ್ತು ಅದಾನಿಗಳಿಗೆ ದೇಶವನ್ನು ಮಾರಾಟ ಮಾಡುತ್ತಿದೆ. ಅವರಿಂದ ನಮ್ಮ ದೇಶವನ್ನು ನಾವು ಕಾಪಾಡಬೇಕಿದೆ ಎಂದು ನೆರೆದ ಲಕ್ಷಾಂತರ ಅನ್ನದಾತರ ಸಮ್ಮುಖದಲ್ಲಿ ರೈತ ನಾಯಕ ರಾಕೇಶ್ ಟಿಕಾಯತ್ ಘರ್ಜಿಸಿದರು.

ಚಳುವಳಿಗಳನ್ನು ಲೆಕ್ಕಿಸದೆ ನಿರ್ಲಕ್ಷಿಸಿದಾಗ ದಿನ ಕಳೆದಂತೆ ಅದರ ಶಕ್ತಿ ಕುಂದಬಹುದು ಎಂಬ ಪ್ರಭುತ್ವದ ಲೆಕ್ಕಾಚಾರ ಈಗ ತಲೆಕೆಳಗಾಗಿದೆ. ರೈತರ ಆಂದೋಲನವು ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ವಿಚಾರವಾಗಿ ಉಳಿದಿಲ್ಲ ಮೋದಿ ಸರ್ಕಾರದ ಒಟ್ಟಾರೆ ನೀತಿಗಳಿಂದಾಗಿ ವಿವಿಧ ಕ್ಷೇತ್ರಗಳಲ್ಲಿ ತೊಂದರೆ ಅನುಭವಿಸಿದ ಹಲವು ವಿಚಾರಗಳು ಇದರಲ್ಲಿ ಸೇರಿಕೊಂಡು ಅನ್ನದಾತರ ಪ್ರತಿಭಟನೆ ವಿರಾಟ್ ರೂಪವನ್ನೇ ಪಡೆದಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ದೇಶದಾದ್ಯಂತ ಇಂತಹ ಪ್ರತಿಭಟನೆಗಳನ್ನು ನಡೆಸಲು ಸಿದ್ದತೆಗಳು ನಡೆದಿದೆ ಎಂದು ರೈತ ನಾಯಕರು ಕೂಡ ಹೇಳಿದ್ದಾರೆ.

ಇನ್ನು ಆರು ತಿಂಗಳಲ್ಲಿ ನಡೆಯಲಿರುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿಗೆ ಇದೊಂದು ನುಂಗಲಾರದ ತುತ್ತು ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ, ಕಳೆದ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಪಶ್ಚಿಮ ಉತ್ತರ ಪ್ರದೇಶದ 148 ಸ್ಥಾನಗಳಲ್ಲಿ 135 ನ್ನು ಬಿಜೆಪಿ ಕಬಳಿಸಿತ್ತು ಬಿಜೆಪಿಯ ಇಂತಹ ಭದ್ರಕೋಟೆಯಲ್ಲೆ ಈ ಬೃಹತ್ ಪ್ರದರ್ಶನ ನಡೆದಿರುವುದು ಮೋದಿ ಮತ್ತು ಆದಿತ್ಯನಾಥ್ ಎದೆಯಲ್ಲಿ ನಡುಕ ಉಂಟಾಗಿರುವುದಂತೂ ನಿಜ.

Spread the love

Related Articles

Leave a Reply

Your email address will not be published. Required fields are marked *

Back to top button