Breaking Newsಇತರ ಕ್ರೀಡೆಕ್ರೀಡೆ

ಯುಎಸ್ ಓಪನ್ ಪ್ರಿಕ್ವಾರ್ಟರ್ ತಲುಪಿದ ಅತ್ಯಂತ ಕಿರಿಯ ಆಟಗಾರ ಕಾರ್ಲೋಸ್

ನ್ಯೂಯಾರ್ಕ್ : ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್ ಯುಎಸ್ ಓಪನ್ ಟೆನಿಸ್ ಚಾಂಪಿಯನ್ಷಿಪ್ ನ ಕ್ವಾರ್ಟರ್ ಫೈನಲ್ ತಲಪುವುದರೊಂದಿಗೆ ಈ ಸಾಧನೆ ಮಾಡಿದ ಜಗತ್ತಿನ ಅತ್ಯಂತ ಕಿರಿಯ ಆಟಗಾರನೆನಿಸಿದ್ದಾರೆ.

ಪೀಟರ್ ಗೊಜೊವಿಕ್ಸಿಕ್ ವಿರುದ್ಧ ನಡೆದ ಪ್ರಿಕ್ವಾರ್ಟ್ ಫೈನಲ್ ಪಂದ್ಯದಲ್ಲಿ 5 ಸೆಟ್ ಗಳ ರೋಚಕ ಜಯ ಗಳಿಸಿದ ಕಾರ್ಲೋಸ್ ಐತಿಹಾಸಿಕ ಸಾಧನೆ ಮಾಡಿದರು. 18 ವರ್ಷದ ಕಾರ್ಲೋಸ್ 5-7, 6-1, 5-7,6-2,6-0 ಅಂತರದಲ್ಲಿ ಜಯ ಗಳಿಸಿ ಇತಿಹಾಸ ಬರೆದರು.

ಮೂರು ದಿನಗಳ ಹಿಂದೆ ಸ್ಟೆಫಾನೊಸ್ ಸಿಸಿಪಾಸ್ ವಿರುದ್ಧ ಅಚ್ಚರಿಯ ಜಯ ಗಳಿಸಿದ್ದ ಕಾರ್ಲೋಸ್ ಅರ್ಹತಾ ಸುತ್ತಿನ ಮೂಲಕ ಪ್ರಿಕ್ವಾರ್ಟ್ ಫೈನಲ್ ತಲುಪಿದ್ದ ಆಟಗಾರನಿಗೆ ಸೋಲಿನ ಆಘಾತ ನೀಡಿದರು. ಮೈಕಲ್ ಚಾಂಗ್ ಫ್ರೆಂಚ್ ಓಪನ್ ಕ್ವಾರ್ಟರ್ ಫೈನಲ್ ತಲುಪಿದ್ದಾಗಲೂ ಅವರಿಗೆ 18 ವರ್ಷ ವಯಸ್ಸಾಗಿತ್ತು. ಮುಂದಿನ ಸುತ್ತಿನಲ್ಲಿ ಕಾರ್ಲೋಸ್ 12 ನೇ ಶ್ರೇಯಾಂಕದ ಆಟಗಾರ ಫೆಲಿಕ್ಸ್ ಆಗರ್ ಅಲಿಯಾಸ್ಸೆಮಿ ವಿರುದ್ಧ ಸೆಣಸಲಿದ್ದಾರೆ.

ಲೈಲಾ ಫೆರ್ನಾಂಡಿಸ್

ವನಿತೆಯರ ವಿಭಾಗದಲ್ಲೂ ಶ್ರೇಷ್ಠ ಆಟಗಾರ್ತಿ ಜಪಾನಿನ ನವೊಮಿ ಒಸಾಕ ವಿರುದ್ಧ ಜಯಗಳಿಸಿ ಅಚ್ಚರಿ ಮೂಡಿಸಿದ್ದ ಕೆನಡಾದ ಲೈಲಾ ಫೆರ್ನಾಂಡಿಸ್ ಮಾಜಿ ಚಾಂಪಿಯನ್ ಜರ್ಮನಿಯ ಏಂಜಲಿಕ್ ಕೆರ್ಬರ್ ವಿರುದ್ಧ ಜಯ ಗಳಿಸಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

4-6, 7-6(7-5), 6-2 ಅಂತರದಲ್ಲಿ ಜಯ ಗಳಿಸಿದ ಲೈಲಾ ಮುಂದಿನ ಸುತ್ತಿನಲ್ಲಿ ಐದನೇ ಶ್ರೇಯಾಂಕಿತ ಎಲೆನಾ ಸ್ವಿಟೋಲಿನಾ ವಿರುದ್ಧ ಸೆಣಸಲಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button