Latestಕಲಬುರ್ಗಿಜಿಲ್ಲಾ ಸುದ್ದಿ
ವಿದ್ಯುತ್ ತಂತಿ ತಗುಲಿ ಯುವ ರೈತ ಸಾವು : ಜೆಸ್ಕಾಂ ವಿರುದ್ಧ ಗ್ರಾಮಸ್ಥರ ಕಿಡಿ

ಕಲಬುರಗಿ: ಜೆಸ್ಕಾಂ ಸಿಬ್ಬಂದಿ ನಿರ್ಲಕ್ಷತನಕ್ಕೆ ಯುವ ರೈತ ಬಲಿಯಾಗಿರುವ ಘಟನೆ ಕಾಳಗಿ ತಾಲೂಕಿನ ಮುಕಳಂಬಾ ಗ್ರಾಮದಲ್ಲಿ ನಡೆದಿದೆ.
ಹೊಲದಲ್ಲಿ ಜೋತು ಬಿದ್ದ ವಿದ್ಯುತ್ ತಂತಿ ತಗುಲಿ ಯುವ ರೈತ ಶಿವಕುಮಾರ (24) ಸಾವನ್ನಪ್ಪಿದ್ದಾನೆ. ಜೋತು ಬಿದ್ದ ವಿದ್ಯುತ್ ತಂತಿ ಸರಿಪಡಿಸಲು ಮನವಿ ಮಾಡಿದ್ದರೂ ಜೆಸ್ಕಾಂ ಸಿಬ್ಬಂದಿ ಗಮನ ಕೊಟ್ಟಿರಲಿಲ್ಲ, ಶೆನಿವಾರ ಸಾಯಂಕಾಲ ಹೊಲದ ಕಡೆಗೆ ಹೋದಾಗ ಶಿವಕುಮಾರಗೆ ತಗುಲಿ ದುರ್ಘಟನೆ ನಡೆದಿದ್ದು, ಜೆಸ್ಕಾಂ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಯುವಕ ಮೃತನಾಗಿ ಐದು ಗಂಟೆಯಾದ್ರೂ ಸ್ಥಳಕ್ಕೆ ಜೆಸ್ಕಾಂ ಅಧಿಕಾರಿಗಳು ಬಂದಿಲ್ಲದ ಕಾರಣ ಅಧಿಕಾರಿಗಳು ಬರುವರೆಗೆ ಶವ ತೆಗೆಯದಿರಲು ಗ್ರಾಮಸ್ಥರ ಪಟ್ಟುಹಿಡಿದು ಕುಳಿತಿದ್ದರು. ಬಳಿಕ ಕಾಳಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಮನವಲಿಸಿ ವಾತಾವರಣ ತಿಳಿಗೊಳಿಸಿದ್ದಾರೆ. ಇತ್ತ ಯುವಕನ ಕುಟುಂಬಸ್ಥರ ಅಕ್ರಂಧನ ಮುಗಿಲು ಮುಟ್ಟಿದೆ.



