Latestಇತರ ಕ್ರೀಡೆಕ್ರೀಡೆ
‘ಸಕ್ಕರಿ’ಯ ಸವಿ ಹೀರಿದ ರಡುಕಾನ ಫೈನಲ್ಗೆ

ನ್ಯೂಯಾರ್ಕ್: ಇದುವರೆಗೂ ಅದ್ಭುತ ಫಲಿತಾಶಗಳೊಂದಿಗೆ ಸೆಮಿಫೈನಲ್ ಪ್ರವೇಶಿಸಿದ್ದ ಗ್ರೀಸ್ ನ ಮಾರಿಯಾ ಸಕ್ಕರಿಗೆ ಸೋಲುಣಿಸಿದ ಬ್ರಿಟನ್ ನ ಎಮ್ಮಾ ರಡುಕಾನು ಯುಎಸ್ ಓಪನ್ ಫೈನಲ್ ತಲುಪಿದ ಮೊದಲ ಕ್ವಾಲಿಫಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಫೈನಲ್ ನಲ್ಲಿ ಅವರು ಕೆನಡಾದ ಲೈಲ್ಹಾ ಫೆರ್ನಾಂಡೀಸ್ ವಿರುದ್ಧ ಸೆಣಸಲಿದ್ದಾರೆ.
ಆರ್ಥರ್ ಆ್ಯಶ್ ಅಂಗಣದಲ್ಲಿ ನಡೆದ ಪಂದ್ಯದಲ್ಲಿ ರಡುಕಾನು 6-1, 6-4 ಅಂತರದಲ್ಲಿ ಸುಲಭ ಜಯ ಗಳಿಸಿ ಫೈನಲ್ ಪ್ರವೇಶಿಸಿದರು.
ಮೊದಲ ಸೆಮಿಫೈನಲ್ ನಲ್ಲಿ ಆರಿನಾ ಸಬಲೆಂಕಾ ವಿರುದ್ಧ ಜಯ ಗಳಿಸಿದ ಲೈಲ್ಹಾ ಫೆರ್ನಾಂಡೀಸ್ ಫೈನಲ್ ತಲುಪಿದ್ದರು. ಇಬ್ಬರೂ ಹದಿಹರೆಯದ ಆಟಗಾರ್ತಿಯರು ಫೈನಲ್ ತಲುಪಿದ್ದು ಇದರೊಂದಿಗೆ ಯುವ ಚಾಂಪಿಯನ್ನರು ಹುಟ್ಟಿಕೊಳ್ಳಲಿದ್ದಾರೆ.
ಶ್ರೇಯಾಂಕ ರಹಿತ ಆಟಗಾರ್ತಿಯರಿಬ್ಬರು ಫೈನಲ್ ತಲುಪಿದ್ದು ಇದೇ ಮೊದಲು. ಇಬ್ಬರೂ ಕೆನಡಾದಲ್ಲಿ ಜನಿಸಿರುವುದು ವಿಶೇಷ.



