Latestಚಿಕ್ಕಮಗಳೂರು

ಚಿಕ್ಕಮಗಳೂರಲ್ಲಿ ಕಾಡಾನೆಯ ಸಿಟಿ ರೌಂಡ್ಸ್!

ಚಿಕ್ಕಮಗಳೂರು: ಕೋವಿಡ್ ಲಾಕ್ಡೌನ್ನಿಂದ ಮನೆಯೊಳಗೇ ಇದ್ದ ಜನ ಈಗ ಲಾಕ್ಡೌನ್ ಮುಕ್ತಗೊಂಡು ತುಸು ನೆಮ್ಮದಿಯಿಂದ ವ್ಯಾಪಾರ, ವಹಿವಾಟಿನಲ್ಲಿ ತೊಡಗಿದ್ದರೆ ನಗರದಲ್ಲಿ ಕಾಡಾನೆಯೊಂದು ಓಡಾಟ ನಡೆಸುತ್ತಿದ್ದು, ಮನೆಯಿಂದ ಹೊರಗಿಳಿಯಲು ಜನ ಹಿಂಜರಿಯುವಂತಾಗಿದೆ.

ಅರಣ್ಯದಂಚಿನ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಡಾನೆ ಕಳೆದ ಎರಡು ದಿನಗಳಿಂದ ಚಿಕ್ಕಮಗಳೂರು ನಗರದಲ್ಲಿ ಓಡಾಡುತ್ತಿದ್ದು ಜನರನ್ನು ಆತಂಕಗೊಳಿಸಿದೆ. ಆಲ್ದೂರು ಮಾರ್ಗ ಸಂಪರ್ಕಿಸುವ ವಸ್ತಾರೆಯಲ್ಲಿ ಪ್ರತ್ಯಕ್ಷವಾಗಿ ಮೂಗ್ತಿಹಳ್ಳಿ, ಉಂಡೇದಾಸರಹಳ್ಳಿ, ಉಪ್ಪಳ್ಳಿ, ಇಂದಾವರದಲ್ಲಿ ಕಾಣಿಸಿಕೊಂಡು ನಗರನಿವಾಸಿಗಳನ್ನು ದಂಗುಬಡಿಸಿದೆ.

ಆದರ್ಶನಗರದಲ್ಲಿ ಓಡಾಟ ನಡೆಸಿ, ಇಂದು ಮುಖ್ಯರಸ್ತೆ ದಾಟಿ ಎಬಿಸಿ ಆವರಣದಲ್ಲಿ ಕಾಣಿಸಿಕೊಂಡು, ನಲ್ಲೂರು ಗೇಟ್ನತ್ತ ಹೋಗಿದೆ. ಅತ್ತಿತ್ತ ಸಂಚರಿಸುತ್ತಿದ್ದ ಆನೆಯನ್ನು ಹಲವರು ನೋಡಿದ್ದು ತಮ್ಮ ಮೊಬೈಲ್ನಲ್ಲಿ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಆನೆಯನ್ನು ನಿಯಂತ್ರಿಸಿ ಕಾಡಿಗೆ ಓಡಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button