Latestಮನರಂಜನೆಸಿನಿಮಾಸೆಲೆಬ್ರಿಟಿ
ಹಿರಿಯ ನಟ ರಾಜೇಶ್ ಆರೋಗ್ಯದಲ್ಲಿ ಕೊಂಚ ಚೇತರಿಕೆ
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕನ್ನಡದ ಹಿರಿಯ ನಟ ರಾಜೇಶ್ ಆರೋಗ್ಯದಲ್ಲಿ ಕೊಂಚ ಮಟ್ಟಿಗಿನ ಚೇತರಿಕೆ ಕಂಡು ಬಂದಿರೋದಾಗಿ ವೈದ್ಯರು ಹೇಳಿದ್ದಾರೆ. 82 ವರ್ಷ ವಯಸ್ಸಿನ ರಾಜೇಶ್ ಕಿಡ್ನಿ ವೈಫಲ್ಯ ಹಾಗೂ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಕಸ್ತೂರ ಬಾ ನಗರದ ನ್ಯೂ ಜನಪ್ರಿಯ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ರಾಜೇಶ್ ಅವರ ಆರೋಗ್ಯ ಸ್ಥಿತಿ ಎರಡು ದಿನಗಳ ಹಿಂದೆ ತುಂಬಾ ಗಂಭೀರವಾಗಿದ್ದಾಗಿ ವೈದ್ಯರು ತಿಳಿಸಿದ್ರು. ಇದೀಗ ರಾಜೇಶ್ ಚಿಕಿತ್ಸೆಗೆ ಸ್ಪಂದಿಸುತ್ತಿರೋದಾಗಿ ವೈದ್ಯರು ಹೇಳಿದ್ದಾರೆ.



