ಲತಾ ಮಂಗೇಶ್ಕರ್ ಪಾರ್ಥಿವ ಶರೀರದ ಮೇಲೆ ಉಗುಳಿದ್ರಾ ಶಾರುಖ್ ಖಾನ್? ಅಷ್ಟಕ್ಕೂ ಕಿಂಗ್ ಖಾನ್ ಹಾಗೆ ಮಾಡಿದ್ದಾದರು ಯಾಕೆ?

ಕ್ವೀನ್ ಆಫ್ ಮೊಲೊಡಿ ಎಂದೇ ಖ್ಯಾತಿ ಘಳಿಸಿದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ನಿನ್ನೆ ಮುಂಬೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕೋವಿಡ್ 19 ಹಾಗೂ ನ್ಯೂಮೋನಿಯಾದಿಂದ ಬಳಲುತ್ತಿದ್ದ ಲತಾ ಮಂಗೇಶ್ಕರ್ ಚಿಕಿತ್ಸೆಗಾಗಿ ದಾಖಲಾಗಿದ್ದರು. ಬಹು ಅಂಗಾಗ ವೈಪಲ್ಯದಿಂದ ಬಳಲುತ್ತಿದ್ದ ಲತಾಜೀ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ನಿಧನರಾಗಿದ್ದಾರೆ.
ಲತಾ ಮಂಗೇಶ್ಕರ್ ಅಂತಿಮ ಸಂಸ್ಕಾರ ಮುಂಬೈನ ಶಿವಾಜಿ ಪಾರ್ಕ್ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು. ಪ್ರಧಾನಿ ಮೋದಿ, ಸಚಿನ್ ತೆಡುಲ್ಕರ್, ಶಾರುಖ್ ಖಾನ್ ದಂಪತಿ ಸೇರಿದಂತೆ ಸಾಕಷ್ಟು ಮಂದಿ ಲತಾ ಅವರ ಅಂತಿಮ ದರ್ಶನ ಪಡೆದರು.
ಲತಾ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಬಂದ ಶಾರುಖ್ ಖಾನ್ ಪಾರ್ಥಿವ ಶರೀರದ ಮೇಲೆ ಉಗುಳಿದ್ದಾರೆ ಅನ್ನೋ ವಿಡಿಯೋವೊಂದ ಸಾಕಷ್ಟು ವೈರಲ್ ಆಗಿತ್ತು. ಇದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದು ಶಾರುಖ್ ನಡೆದುಕೊಂಡ ರೀತಿಗೆ ಪರ ವಿರೋಧಗಳು ಕೇಳಿ ಬಂದಿತ್ತು. ಶಾರುಖ್ ವರ್ತನೆಯನ್ನ ಸಾಕಷ್ಟು ಮಂದಿ ಬಲವಾಗಿ ಖಂಡಿಸಿದ್ರೆ ಮತ್ತೊಂದಷ್ಟು ಮಂದಿ ಶಾರುಖ್ ಪರವಾಗಿ ಬ್ಯಾಟ್ ಬೀಸಿದ್ದಾರೆ.
ಪತ್ನಿಯ ಜೊತೆ ಲತಾಜೀ ಅವರ ಪಾರ್ಥಿವ ಶರೀರದ ದರ್ಶನಕ್ಕೆ ಬಂದ ಶಾರುಖ್ ಖಾನ್ ಮೊದಲಿಗೆ ಪಾರ್ಥನೆ ಸಲ್ಲಿಸಿದ್ದಾರೆ. ಬಳಿಕ ತಾವು ಧರಿಸಿದ್ದ ಮಾಸ್ಕ್ ತೆಗೆದು ಪಾರ್ಥಿವ ಶರೀರದ ಮೇಲೆ ಗಾಳಿ ಊದಿದ್ದಾರೆ. ಇದು ಸಾಕಷ್ಟು ಪರ ವಿರೋಧಕ್ಕೆ ಕಾರಣವಾಗಿದ್ದು, ಶಾರುಖ್ ಲತಾ ಅವರ ಪಾರ್ಥಿವ ಶರೀರಕ್ಕೆ ಉಗುಳಿದ್ದಾರೆ ಅನ್ನೊ ಮಾತು ಕೇಳಿ ಬಂದಿತ್ತು.
ಶಾರುಖ್ ಖಾನ್ ಅಲ್ಲಿ ಉಗುಳಲಿಲ್ಲ. ಅವರು ಊದಿದರು. ಇದು ಇಸ್ಲಾಂನಲ್ಲಿ ಕಾಮನ್ ಪ್ರಾಕ್ಟೀಸ್. ಮುಸ್ಲಿಮರು ಪವಿತ್ರ ಕುರಾನ್ನಿಂದ ಆಯತ್ಗಳನ್ನು ಪಠಿಸಿದ ನಂತರ ಅವರ ಬಾಯಿಯಿಂದ ಗಾಳಿಯನ್ನು ಊದುತ್ತಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಶಾರುಖ್ ಖಾನ್ ಅವರು ಉಗುಳಲಿಲ್ಲ. ಅವರು ತಮ್ಮ ಧರ್ಮದ ಪ್ರಕಾರ ಲತಾಜೀಗೆ ಕೆಟ್ಟದನ್ನು ನಿವಾರಿಸಿದ್ದಾರೆ. ದುಷ್ಟಶಕ್ತಿಗಳನ್ನ ದೂರವಿಡಲು ಶಾರುಖ್ ಹೀಗೆ ಮಾಡಿದ್ದಾರೆ ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.



