ಲತಾ ಮಂಗೇಶ್ಕರ್ ಸಾಂಸ್ಕೃತಿಕ ಐಕಾನ್, ದಂತಕತೆ: ಬಾಂಗ್ಲಾ ಪ್ರಧಾನಿ

ಢಾಕಾ: ಭಾರತ ರತ್ನ, ಗಾನಕೋಗಿಲೆ ಲತಾ ಮಂಗೇಶ್ಕರ್ ನಿಧನಕ್ಕೆ ಬಾಂಗ್ಲಾ ದೇಶದ ಪ್ರಧಾನಿ ಶೇಕ್ ಹಸೀನಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂತಾಪ ಪತ್ರ ಕಳುಹಿಸಿದ್ದಾರೆ. ಈ ದುಃಖದ ಸಮಯದಲ್ಲಿ ಭಾಂಗ್ಲಾ ದೇಶದ ಜನರು ಭಾರತದ ಜನರೊಂದಿಗೆ ಒಗ್ಗಟ್ಟಿನಿಂದ ಶೋಕಿಸುತ್ತಾರೆ ಎಂದು ತಮ್ಮ ಪತ್ರದಲ್ಲಿ ಅವರು ತಿಳಿಸಿದ್ಧಾರೆ.
ಲತಾ ಮಂಗೇಶ್ಕರ್ ಅವರನ್ನು ಸಾಂಸ್ಕೃತಿಕ ಐಕಾನ್ ಮತ್ತು ದಂತಕಥೆ ಎಂದು ಕರೆದ ಪ್ರಧಾನಿ ಹಸೀನಾ, ಸಾರ್ವಕಾಲಿಕ ಅತ್ಯಂತ ನಿಪುಣ ಕಲಾವಿದರಲ್ಲಿ ಒಬ್ಬರು ಎಂದು ಹೇಳಿದ್ದಾರೆ. ಅವರ ಅಸಾಧಾರಣ ಮಧುರ ಧ್ವನಿಯೊಂದಿಗೆ ಅವರು ಬಾಂಗ್ಲಾ ಸೇರಿದಂತೆ ವಿವಿಧ ಭಾಷೆಗಳಲ್ಲಿ ಅಸಂಖ್ಯಾತ ಹಾಡುಗಳನ್ನು ಹಾಡಿದ್ದಾರೆ. ಈ ಪ್ರದೇಶದಲ್ಲಿ ಮತ್ತು ಅದರಾಚೆಗಿನ ಲಕ್ಷಾಂತರ ಜನರ ಹೃದಯವನ್ನು ಮುಟ್ಟಿದ್ದಾರೆ ಎಂದೂ ಪ್ರಧಾನಿ ಹಸೀನಾ ಹೇಳಿದ್ದಾರೆ.
ಲತಾ ಅವರ ಹಾಡುಗಳು ಬಾಂಗ್ಲಾ ಸಂಸ್ಕೃತಿಕ ನಿಧಿಯ ಅವಿಭಾಜ್ಯ ಅಂಗವಾಗಿದೆ. ಬಾಂಗ್ಲಾದೇಶದ ವಿಮೋಚನಾ ಯುದ್ಧದಲ್ಲಿ ಲತಾ ಮಂಗೇಶ್ಕರ್ ನಿರ್ವಹಿಸಿದ ಪಾತ್ರವನ್ನು ಪ್ರಧಾನಿ ಶೇಖ್ ಹಸೀನಾ ಗೌರವ ಮತ್ತು ಕೃತಜ್ಱತೆಯಿಂದ ಸ್ಮರಿಸಿದ್ದಾರೆ. ವಿಮೋಚನಾ ಯುದ್ಧದ ಸಮಯದಲ್ಲಿ ಭಾರತೀಯರಲ್ಲಿ ಬಾಂಗ್ಲಾದೇಶದ ಕಾರಣವನ್ನು ಉತ್ತೇಜಿಸಲು ಲತಾಜಿ ತನ್ನ ಸಹ ಭಾರತೀಯ ಕಲಾವಿದರೊಂದಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಪತ್ರದಲ್ಲಿ ಶೇಖ್ ಹಸೀನಾ ಪ್ರಸ್ತಾಪಿಸಿದ್ದಾರೆ.
