ಮಾಜಿ ಶಾಸಕ ಬಿಆರ್ ಪಾಟೀಲ್‌ಗೆ ಕ್ಷಮೆ ಕೊರಿದ ಡಿಕೆಶಿ

ಕಲಬುರಗಿ: ಮೇಕೆದಾಟು ಪಾದಯಾತ್ರೆ ಸಂಧರ್ಭದಲ್ಲಿ ಆಳಂದ ಮಾಜಿ ಶಾಸಕ ಬಿ ಆರ್ ಪಾಟೀಲ್ ಅವರನ್ನು ತಳ್ಳಿ ಅವಮಾನ ಮಾಡಿದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕ್ಷೇಮೆ ಯಾಚಿಸಿದ್ದಾರೆ.
ಡಿಕೆ ಶಿವಕುಮಾರ್ ವರ್ತನೆಗೆ ಆಕ್ರೋಶಗೊಂಡ ಬಿ ಆರ್ ಪಾಟೀಲ್ ಹಾಗೂ ಅವರ ಅಭಿಮಾನಿಗಳು ಕ್ಷಮೆಯಾಚಿಸುವಂತೆ ಪಟ್ಟು ಹಿಡಿದಿದ್ರು. ನಾನು ಯಾವುದೇ ಕಾರಣಕ್ಕೂ ರಾಜಿ ಆಗೋದಿಲ್ಲ ಸ್ವಾಭಿಮಾನ ಇದ್ದವರ್ಯಾರು ಇದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಬಿ ಆರ್ ಪಾಟೀಲ್ ಸಹ ಡಿಕೆಶಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಒತ್ತಡಕ್ಕೆ ಮಣಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಬಿಆರ್ ಪಾಟೀಲ್ ಅವರಿಗೆ ಕ್ಷಮೆ ಕೋರಿ ಪತ್ರ ಬರೆದಿದ್ದಾರೆ. ಮೇಕೆದಾಟು ಪಾದಯಾತ್ರೆಯ ಸಂದರ್ಭದಲ್ಲಿ ನಾನು ಅವಮಾನ ಮಾಡಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ನನಗೆ ತುಂಬಾ ಖೇದ ಉಂಟು ಮಾಡಿದೆ. ತಮ್ಮಂತಹ ಹಿರಿಯರ ಜೊತೆ ಈ ರೀತಿ ಅನುಚಿತವಾಗಿ ನಡೆದುಕೊಳ್ಳುವುದನ್ನು ನಾನು ಕನಸು-ಮನಸಿನಲ್ಲಿಯೂ ಎಣಿಸಿಕೊಳ್ಳಲು ಸಾಧ್ಯವಿಲ್ಲ. ಈ ಘಟನೆ ನನಗೆ ಅರಿವಿಲ್ಲದೆ ನಡೆದಿದೆ. ಜನರ ನೂಕನುಗಲ್ಲಿನಲ್ಲಿ ಅಚಾತುರ್ಯ ನಡೆದಿದ್ದರೆ ನಾನು ವಿಷಾಧಿಸುತ್ತೆನೆ ಎಂದಿದ್ದಾರೆ.
ನಾನು ಪಕ್ಷದ ಆದೇಶದಂತೆ ಗೋವಾ ಚುನಾವಣೆಯಲ್ಲಿರುವೆ ಇಲ್ಲಿಂದ ವಾಪಸ್ಸಾದ ತಕ್ಷಣ ತಮಗೆ ಭೇಟಿಯಾಗುವೆ. ದಯವಿಟ್ಟು ಮನಸಿಗೆ ಬೇಜಾರು ಮಾಡಿಕೊಳ್ಳಬೇಡಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
