Latestಜಿಲ್ಲಾ ಸುದ್ದಿರಾಮನಗರ

ಪಿಎಸ್ಐ ಹುದ್ದೆ ಕೊಡಿಸುವುದಾಗಿ 14 ಲಕ್ಷ ದೋಖಾ: ಮೂರು ಮಂದಿ ಆರೋಪಿಗಳ ಬಂಧನ

ರಾಮನಗರ: ಪಿಎಸ್ಐ ಹುದ್ದೆ ಕೊಡಿಸುವುದಾಗಿ 14 ಲಕ್ಷ ರೂ. ದೋಖಾ ಪ್ರಕರಣದಲ್ಲಿ ಮೂವರ ವಿರುದ್ದ ಚನ್ನಪಟ್ಟಣಪುರ ಪೊಲೀಸ್ ಠಾಣೆಯಲ್ಲಿ‌ ದೂರು ದಾಖಲಾಗುತ್ತಿದ್ದಂತೆ ಮೂವರು ಆರೋಪಿಗಳನ್ನ ಬಂಧಿಸಲಾಗಿದೆ‌.

ಬೆಂಗಳೂರು ದಕ್ಷಿಣ ತಾಲೂಕಿನ‌ ಕೆಂಗೇರಿ ಬಳಿಯ ರಾಮೋಹಳ್ಳಿಯ ಗೋವಿಂದರಾಜು ಮತ್ತು ದಿಲೀಪ್ ಎಂಬುವರಿಂದ ಪಿಎಸ್ಐ ಹುದ್ದೆ ಕೊಡಿಸುವುದಾಗಿ 14 ಲಕ್ಷ ಹಣ ಪಡೆದು ಈ ಮೂವರು ವಂಚನೆ ಮಾಡಿದ್ದಾರೆಂದು ದೂರು ದಾಖಲಾಗಿತ್ತು.

ಚನ್ನಪಟ್ಟಣ ನಗರದ ಗಿರೀಶ್, ವಂದಾರಗುಪ್ಪೆ ಪೊಲೀಸ್ ತರಬೇತಿ ಶಾಲೆಯ ರೋಹಿತ್ ಕುಮಾರ್ ಮತ್ತು ಶ್ರೀನಿವಾಸ್ ಬಂದಿತ ಆರೋಪಿಗಳಾಗಿದ್ದ ನಮ್ಮ ಬಳಿಯಿಂದ ಈ ಮೂರು ಮಂದಿ ಪಿಎಸ್ಐ ಹುದ್ದೆ ಕೊಡಿಸುವುದಾಗಿ ಭರವಸೆ ನೀಡಿ 36 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ನಾವು ಹಂತ ಹಂತವಾಗಿ ಹಣ ನೀಡುವುದಾಗಿ ಹೇಳಿ 14 ಲಕ್ಷ ನೀಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ನಾವು 1 ಲಕ್ಷ, 2 ಲಕ್ಷ, 5 ಲಕ್ಷ ಹೀಗೆ ಹಂತ ಹಂತವಾಗಿ ಗಿರೀಶ್, ರೋಹಿತ್ ಕುಮಾರ್ ಮತ್ತು ಶ್ರೀನಿವಾಸ್ ಗೆ 14 ಲಕ್ಷ ನೀಡಿದ್ದು, ಒಂದು ವರ್ಷ‌ ಕಳೆದರೂ ನಮ್ಮ‌ ಕೆಲಸ ಮಾಡಿ ಕೊಡಲಿಲ್ಲ. ಕೆಲಸ ಮಾಡಿಕೊಡದಿದ್ದಕ್ಕೆ ಹಣ ಮರುಪಾವತಿ ಮಾಡಲು ಕೇಳಿದ್ದಕ್ಕೆ ಚೆಕ್ ನೀಡಿ ವಂಚಿಸಿದ್ದು, ಇದಲ್ಲದೇ ಈ ಬಗ್ಗೆ ನಾವು ಪ್ರಶ್ನಿಸಿದ್ದಕ್ಕೆ ನಮಗೆ ಪ್ರಾಣ ಬೆದರಿಕೆ ಹಾಕಿದ್ದಾರೆ.

ನೀವು ಪೊಲೀಸರಿಗೆ ದೂರು ನೀಡಿದ್ರು ಏನು ಮಾಡಿಕೊಳ್ಳು ಆಗೋಲ್ಲ ಎಂದು ಧಮಕಿ ಹಾಕಿದ್ದಾರೆ. ಚನ್ನಪಟ್ಟಣ ಟೌನ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.

Spread the love

Related Articles

Leave a Reply

Your email address will not be published. Required fields are marked *

Back to top button