Latestಕಲಬುರ್ಗಿಜಿಲ್ಲಾ ಸುದ್ದಿ
Crime News: ಬೆಳ್ಳಂಬೆಳಗ್ಗೆ ನಡುರಸ್ತೆಯಲ್ಲಿ ವ್ಯಕ್ತಿಯ ಬರ್ಬರ ಕೊಲೆ

ಕಲಬುರಗಿ: ಚಿತ್ತಾಪುರ – ರಾವೂರ ಮಾರ್ಗ ಮದ್ಯೆಯ ಯರಗಾ ಕ್ರಾಸ್ ಬಳಿ ವ್ಯಕ್ತಿಯ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಮುಖದ ಮೇಲೆ ಸೈಜುಗಲ್ಲು ಹಾಕಿ ಬರ್ಬರವಾಗಿ ಕೊಲೆಗೈದಿರುವ ಘಟನೆ ನಡೆದಿದೆ.
ಕೊಲೆಯಾದ ವ್ಯಕ್ತಿ ಅಂದಾಜು 45-50 ವರ್ಷ ವಯಸ್ಸಿನ ಆಸುಪಾಸಿನವನಾಗಿದ್ದು, ಯಾರು? ಯಾವ ಊರಿನವರು? ಅನ್ನೋದು ಇನ್ನು ಪತ್ತೆಯಾಗಿಲ್ಲ, ಸ್ಥಳಕ್ಕೆ ಭೇಟಿ ನೀಡಿದ ಚಿತ್ತಾಪುರ ಪೊಲೀಸರು ಪತ್ತೆಕಾರ್ಯ ಆರಂಭಿಸಿದ್ದಾರೆ.
ರಕ್ತ ಇನ್ನೂ ಹಸಿಯಾಗಿದ್ದು, ನಸುಕಿನ ಜಾವ ಕೊಲೆ ನಡೆದಿರಬಹುದು ಎಂದು ಅಂದಾಜುಸಲಾಗಿದೆ. ದರೋಡೆಕೊರರು ಮಾಡಿದ ಕೃತ್ಯ ಅಥವಾ ಹಳೆಯ ವೈಷಮ್ಯದ ಹಿನ್ನಲೆ ಕೊಲೆ ನಡೆದಿದೆಯಾ? ಅನ್ನೋದು ಪೊಲೀಸರ ಪ್ರಾಥಮಿಕ ತನಿಖೆ ನಂತರ ತಿಳಿದು ಬರಬೇಕಿದೆ. ಯರಗಾ ಹಾಗೂ ರಾವೂರ ಹತ್ತಿರದಲ್ಲಿಯೇ ಘಟನೆ ನಡೆದಿರುವದರಿಂದ ಗ್ರಾಮಸ್ಥರು ಭಯಭೀತಗೊಂಡಿದ್ದಾರೆ.



