Breaking NewsLatestರಾಷ್ಟ್ರೀಯಸುದ್ದಿ
ಸಂಸತ್ತಿನ ಒಟ್ಟು 718 ಸಿಬ್ಬಂದಿಗೆ ಕೋವಿಡ್ ಸೋಂಕು

ನವದೆಹಲಿ: ಕಳೆದ 9ರಿಂದ 12ರವರೆಗೆ ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ ಸಂಸತ್ತಿನ ಮುನ್ನೂರಕ್ಕೂ ಹೆಚ್ಚು ಸಿಬ್ಬಂದಿಗೆ ಸೋಂಕು ತಗುಲಿರುವುದು ಖಚಿತವಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ. ಇದಕ್ಕೂ ಮುನ್ನ ನಡೆಸಲಾದ ಪರೀಕ್ಷೆಯಲ್ಲಿ 400 ರಕ್ಕೂ ಹೆಚ್ಚು ಸಿಬ್ಬಂದಿಗೆ ಸೋಂಕು ತಗುಲಿರುವುದು ಖಚಿತವಾಗಿತ್ತು. ಈವರೆಗೆ ಒಟ್ಟು 718 ಸಿಬ್ಬಂದಿಗೆ ಸೋಂಕು ತಗಲಿದೆ. ಇದರಲ್ಲಿ 204 ರಾಜ್ಯಸಭೆಯ ಸಿಬ್ಬಂದಿ ಹೊರತು ಪಡಿಸಿದರೆ ಉಳಿದವರೆಲ್ಲರೂ ಲೋಕಸಭೆ ಸಿಬ್ಬಂದಿಯಾಗಿದ್ದಾರೆ.
ಈ ನಡುವೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸಂಸತ್ತಿನ ಸಮುಚ್ಚಯಕ್ಕೆ ಭೇಟಿ ಕೋವಿಡ್ ನಿಯಂತ್ರಣಕ್ಕಾಗಿ ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ನಿಗದಿಯಂತೆ ಫೆಬ್ರವರಿ 1 ರಂದು ಕೇಂದ್ರದ ಪ್ರಸಕ್ತ ಸಾಲಿನ ಮುಂಗಡಪತ್ರ ಮಂಡನೆಯಾಗಲಿದೆ. ಕೋವಿಡ್ ಹಿನ್ನಲೆಯಲ್ಲಿ ಸಂಸತ್ ಅಧಿವೇಶನವನ್ನು ಎರಡು ಪಾಳಿಯಲ್ಲಿ ನಡೆಸಲು ಸಹ ಗಂಭೀರ ಚಿಂತನೆ ನಡೆಸಲಾಗಿದೆ.
