Breaking NewsLatestಕಲಬುರ್ಗಿಜಿಲ್ಲಾ ಸುದ್ದಿ
ಹಿಜಾಬ್ ವಿಚಾರವಾಗಿ ನ್ಯಾಯಾಲಯ ಐತಿಹಾಸಿಕ ತೀರ್ಪು: ಶ್ರೀರಾಮ ಸೇನೆ ಸ್ವಾಗತ

ಕಲಬುರಗಿ: ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ನೀಡಿದ ತೀರ್ಪು ಮಹತ್ವದ ತೀರ್ಪು ಆಗಿದೆ. ಮುಸ್ಲಿಂ ವಿದ್ಯಾರ್ಥಿನಿಯರು ಆದೇಶವನ್ನು ಗೌರವದಿಂದ ಪಾಲಿಸಬೇಕು ಅಂತ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಹೈಕೋರ್ಟ್ ತೀರ್ಪು ಐತಿಹಾಸಿಕ ತೀರ್ಪಾಗಿದೆ. ಆದೇಶವನ್ನು ಗೌರವದಿಂದ ಕಾಣಬೇಕು. ಹಿಜಾಬ್ ವಿರುದ್ಧದ ಹೋರಾಟದಲ್ಲಿ ಅನೇಕರ ಮೇಲೆ ಕೇಸ್ ಹಾಕಲಾಗಿದೆ. ಶಿವಮೊಗ್ಗದಲ್ಲಿ ಹರ್ಷನ ಕೊಲೆಯಾಗಿದೆ. ಈ ತೀರ್ಪಿನಿಂದ ಹರ್ಷನ ಆತ್ಮಕ್ಕೆ ಶಾಂತಿ ಸಿಕ್ಕಿದೆ ಎಂದರು.
ಹಿಂದು ಮತ್ತು ಮುಸ್ಲಿಂರು ಹೈಕೋರ್ಟ್ ಆದೇಶ ಪಾಲಿಸಬೇಕು. ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿ ಕುಚೇಷ್ಟೆ ಮಾಡಿದ್ರೆ ಅವರನ್ನು ಒದ್ದು ಶಾಲೆಯಿಂದ ಹೊರಗೆ ಹಾಕಬೇಕು ಅಂತ ಹೇಳಿದರು.
