Latestರಾಷ್ಟ್ರೀಯಸುದ್ದಿ

ಲಡ್ಕಿ ಹೂಂ, ಲಡ್ ಸಕ್ತೀ ಹೂಂ ಅಭಿಯಾನಕ್ಕೆ ತಡೆ: ಕಾಂಗ್ರೆಸ್ ಕಿಡಿ

ಲಕ್ನೋ: ಮಹಿಳಾ ವಿರೋಧಿಯಾಗಿ ಯುವಜನರ ಕನಸುಗಳನ್ನು ದಮನ ಮಾಡುತ್ತಿರುವ ʼಬುಲ್ಡೋಜರ್ ನಾಥ್ʼ ಆಟ ಇನ್ನುಮುಂದೆ ನಡೆಯಲ್ಲ ಎಂದು ಉತ್ತರ ಪ್ರದೇಶದ ಸಿಎಂ ಆದಿತ್ಯನಾಥ್  ವಿರುದ್ಧ ಕಾಂಗ್ರೆಸ್ ಹೇಳಿದೆ. ಪಕ್ಷದ ನಾಯಕಿ  ಪ್ರಿಯಾಂಕ ಗಾಂಧಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ʼಲಡ್ಕಿ ಹೂಂ, ಲಡ್ ಸಕ್ತೀ ಹೂಂ ಎಂಬ ಪ್ರಚಾರ ಅಭಿಯಾನ ಮತ್ತು ಐದು ಕಿ.ಮೀ ಮ್ಯಾರಥಾನ್ ಓಟಕ್ಕೆ ಸರ್ಕಾರ ಅವಕಾಶ ನೀಡದಿರುವುದಕ್ಕೆ  ಸಿಡಿಮಿಡಿಗೊಂಡಿರುವ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳಲ್ಲಿ ಸಿಎಂ ಆದಿತ್ಯನಾಥ್ ವಿರುದ್ಧ ಹರಿಹಾಯ್ದಿದೆ. 

ಒಬ್ಬರ ಸಮಯ ಬಂದಾಗ, ಜಗತ್ತಿನ ಯಾವ ಶಕ್ತಿಯೂ ಅವರನ್ನು ತಡೆಯಲಾಗದು ಎಂಬುದು ಅವರಿಗೆ ತಿಳಿದಿಲ್ಲ. ಲಡ್ಕೀ ಹೂಂ, ಲಡ್ ಸಕ್ತೀ ಹೂಂʼ ಘೋಷಣೆ  ರಾಜ್ಯದೆಲ್ಲಡೆ ವ್ಯಾಪಿಸಿದ್ದು, ಮಹಿಳಾ ಶಕ್ತಿ ಅಧಿಕಾರದ ಹಕ್ಕು ಪ್ರತಿಪಾದಿಸಲಿದೆ ಎಂದು ಕಾಂಗ್ರೆಸ್ ಹೇಳಿದೆ.

Spread the love

Related Articles

Leave a Reply

Your email address will not be published. Required fields are marked *

Back to top button