Breaking NewsLatestರಾಷ್ಟ್ರೀಯಸುದ್ದಿ

ನಾಥೂರಾಂ ಗೂಡ್ಸೆ ಬಗ್ಗೆ ಪ್ರಶಂಸೆ: ಹಿಂದೂ ಮುಖಂಡನ ವಿರುದ್ಧ ಎಫ್ ಐ ಆರ್

 ನವದೆಹಲಿ : ಮಹಾತ್ಮ ಗಾಂಧಿ   ಹಂತಕ ನಾಥುರಾಮ್ ಗೂಡ್ಸೆ ಮಾಡಿದ  ಕೆಲಸ ಕಾರ್ಯಗಳನ್ನು ಬಹಿರಂಗವಾಗಿ ಪ್ರಶಂಸಿದ್ದಕ್ಕಾಗಿ ಛತ್ತೀಸ್ ಘಡ ಪೊಲೀಸರು ಹಿಂದೂ ನಾಯಕ ಮತ್ತು  ಅವರ ಬೆಂಬಲಿಗರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

 ಕಾಳಿ ಚರಣ್ ಮಹಾರಾಜ್ ಮತ್ತು ಇತರರ ವಿರುದ್ಧ  ರಾಜ್ಯ ಪೊಲೀಸರು  ಎಫ್ಐಆರ್ ದಾಖಲು  ಮಾಡಿದ್ದಾರೆ. ಕಾಂಗ್ರೆಸ್ ನಾಯಕ ಹಾಗೂ ಮಾಜಿ ಮೇಯರ್ ಪ್ರಮೋದ್ ದುಬೆ ನೀಡಿದ ದೂರಿನ  ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 ರಾಯಪುರದಲ್ಲಿ ಇದೇ 26 ರಂದು ನಡೆದ ದ ಧರ್ಮ ಸಂಸತ್ ಸಭೆಯಲ್ಲಿ ನಾಥುರಾಮ್ ಗೋಡ್ಸೆ ಮಾಡಿದ ಕೆಲಸಗಳು ನಿಜಕ್ಕೂ  ಮೆಚ್ಚತಕ್ಕ ಕೆಲಸ,  ಮತ್ತು ಪ್ರಶಂಸನೀಯ ಕೆಲಸವಾಗಿತ್ತು ಎಂಬ ಬಹಿರಂಗ ಹೇಳಿಕೆ ನೀಡಿ  ವಿವಾದಕ್ಕೆ  ಗುರಿಯಾಗಿದ್ದರು.

ಹರಿದ್ವಾರದಲ್ಲಿ ಇತ್ತಿಚೆಗೆ ನಡೆದ  ಧರ್ಮಸಂಸತ್ ಸಭೆಯಲ್ಲೂ  ಕೆಲವು ಹಿಂದೂ ಮುಖಂಡರು ಶಾಂತಿ ಸಾಮರಸ್ಯ ಕದಡುವ ರೀತಿಯಲ್ಲಿ ಹೇಳಿಕೆ ನೀಡಿದ್ದು, ಇದು ದೇಶವಲ್ಲದೆ ವಿಶ್ವಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ನೀಡಿದ ದೂರಿನ ಮೇರೆಗೆ ಹಿಂದೂ ನಾಯಕನ ವಿರುದ್ಧ ಪೊಲೀಸರು ಪ್ರಥಮ ಮಾಹಿತಿ ಪ್ರಕರಣ  ದಾಖಲಿಸಿಕೊಂಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button