Breaking NewsLatestಮೆಟ್ರೋಸುದ್ದಿ
ಕೆ.ಆರ್.ಪುರಂ ಕ್ಷೇತ್ರದಲ್ಲಿ ಸಿಎಂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಬೆಂಗಳೂರಿನ ಕೆ.ಆರ್.ಪುರಂ ಕ್ಷೇತ್ರದಲ್ಲಿ ಸರಣಿ ಅಭಿವೃದ್ಧಿ ಕಾಮಗಾರಿ ಹಾಗೂ ಶಿಲಾನ್ಯಾಸ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಕ್ಷೇತ್ರದ ಜಗದೀಶ್ ನಗರದಲ್ಲಿ 7.50 ದಶಲಕ್ಷ ಲೀಟರ್ ಸಾಮರ್ಥ್ಯದ ಚೌಕಾಕಾರದ ನೆಲಮಟ್ಟದ ಜಲ ಸಂಗ್ರಹಾರ ಲೋಕಾರ್ಪಣೆ ನೆರವೇರಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ನೀರನ್ನು ವ್ಯರ್ಥ ಮಾಡದೇ ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಈ ಯೋಜನೆಯಿಂದ ಒಂಭತ್ತು ಪ್ರಮುಖ ಬಡಾವಣೆಗಳಿಗೆ ನೀರನ್ನು ಒದಗಿಸಲಾಗುವುದು. ಕೆ.ಆರ್.ಪುರಂನ ಸಮಗ್ರ ಅಭಿವೃದ್ಧಿಗೆ ದಾಖಲೆಯ ಕೆಲಸಗಳನ್ನು ಸಚಿವ ಬಿ.ಎ.ಬಸರಾಜ ಅವರು ಮಾಡಿದ್ದು, ಆ ಪೈಕಿ ಜಿ.ಎಲ್.ಆರ್ ಕೆಲಸವೂ ಒಂದು. ಜನಪರ, ಜನರ ಬಗ್ಗೆ ಕಳಕಳಿ ಇರುವ ಜನ ಸೇವಕರಾಗಿ ಕೆಲಸವನ್ನು ಬೈರತಿ ಬಸವರಾಜ ಅವರು ಮಾಡುತ್ತಿದ್ದಾರೆ ಎಂದರು.
ಸಚಿವರಾದ ಬಿ.ಎ. ಬಸವರಾಜ, ಡಾ: ಕೆ.ಸುಧಾಕರ್, ಎಸ್.ಟಿ.ಸೋಮಶೇಖರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
