
ನವದೆಹಲಿ: ರಫೇಲ್ ಹಗರಣ ವಿಚಾರ ಮತ್ತೆ ಮುನ್ನೆಲೆಗೆ ಬರುತ್ತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಟ್ವಿಟ್ ಒಂದರಲ್ಲಿ ಗಡ್ಡಕ್ಕೆ ಯುದ್ಧವಿಮಾನವೊಂದು ಜೋತುಕೊಂಡಿರುವ ಚಿತ್ರ ಹಾಕಿ, ‘ಚೋರ್ ಕಿ ದಾಢಿ’ (ಕಳ್ಳನ ಗಡ್ಡ) ಎಂದು ಪ್ಬರಧಾನಿ ಮೋದಿಯ ಕಾಲೆಳೆದಿರುವುದು ಗಮನ ಸೆಳೆದಿದೆ.
ಯುಪಿಎ ಸರ್ಕಾರದ ಅವಧಿಯಲ್ಲಿ ಆಗಿದ್ದ ಒಪ್ಪಂದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಮೋದಿ ಸರ್ಕಾರ ಫ್ರಾನ್ಸ್ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ಬಗ್ಗೆ ಕಾಂಗ್ರೆಸ್ ನಿರಂತರವಾಗಿ ಟೀಕಿಸುತ್ತಲೇ ಬಂದಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಐಟಿ ವಿಭಾಗದ ಅಮಿತ್ ಮಾಳವೀಯ, ಕಾಂಗ್ರೆಸ್ನ್ನು ಜನತೆ ತಿರಸ್ಕರಿಸಿದೆ, ಮುಂದಿನ ಚುನಾವಣೆಯನ್ನು ಇದೇ ವಿಇಚಾರದ ಮೇಲೆ ಎದುರಿಸೋನ ಎಂದಿದ್ದಾರೆ.



