Breaking NewsLatestಜಿಲ್ಲಾ ಸುದ್ದಿರಾಜಕೀಯರಾಜ್ಯಹುಬ್ಬಳ್ಳಿ - ಧಾರವಾಡ

ನಾಯಕತ್ವ ಬದಲಾವಣೆ ವರಿಷ್ಠರ ತೀರ್ಮಾನವೇ ಅಂತಿಮ: ಶಾಸಕ ಶಂಕರ್ ಪಾಟೀಲ್​​​​ ಮುನೇನಕೊಪ್ಪ

ಧಾರವಾಡ : ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ವಿಚಾರದಲ್ಲಿ ನಮ್ಮ ಪಕ್ಷದ ವರಿಷ್ಠರ ತೀರ್ಮಾನವೆ ಅಂತಿಮವಾಗಿದೆ, ಅಲ್ಲದೆ ನಾಯಕತ್ವ ಬದಲಾವಣೆ ವಿಚಾರದಲ್ಲಿ ನಾನು ಎಂದಿಗೂ ಗೊಂದಲದ ಹೇಳಿಕೆಯನ್ನು ಇದುವರೆಗೂ ನೀಡಿಲ್ಲ. ಮುಂದೆಯೂ ನೀಡುವುದಿಲ್ಲ. ನನಗೆ ನಮ್ಮ ಪಕ್ಷದ ನಾಯಕರು ಎರಡ್ಮೂರು ಜವಾಬ್ದಾರಿ ನೀಡಿದ್ದಾರೆ, ಇನ್ನೂ ಹೆಚ್ಚಿನ ಜವಾಬ್ದಾರಿ ನೀಡಿದಲ್ಲಿ ಅದನ್ನು ನಾನು ನಿಭಾಸುತ್ತೇನೆ ನವಲಗುಂದ ಶಾಸಕ ಶಂಕರ್ ಪಾಟೀಲ್ ಮುನೇನಕೊಪ್ಪ ಹೋರಹಾಕಿದ್ದಾರೆ.

ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ, ಕೇಂದ್ರ ಹಾಗೂ ರಾಜ್ಯದ ನಾಯಕರ ತೀರ್ಮಾಣವೇ ಅಂತಿಮವಾಗಿರುತ್ತದೆ. ನಾಯಕತ್ವ ಬದಲಾವಣೆ ವಿಚಾರ ಬಿಟ್ಟು, ನೀವು ಕೇಳಿದ ಬೇರೆ ಬೇರೆ ಪ್ರಶ್ನೆಗಳಿಗೆ ನಾನು ಉತ್ತರ‌ ನೀಡಿದ್ದೇನೆ, ಆದರೆ ನಾಯಕತ್ವ ಬದಲಾವಣೆ ವಿಚಾರದಲ್ಲಿ ನಾನು ಹೆಚ್ಚು ಮಾತನಾಡುವುದಿಲ್ಲ ಎನ್ನುವ ಮೂಲಕ ಶಾಸಕರು ಜಾರಿಕೊಂಡರು.

ಈ ಹಿಂದಿನಿಂದಲೂ ನಾನು ಯಾವತ್ತಿಗೂ ಪಕ್ಷದಲ್ಲಿ ಸ್ಥಾನ ಮಾನ ಕೇಳಿಲ್ಲಾ ಮುಂದೆಯೂ ಕೇಳುವುದಿಲ್ಲಾ. ಪಕ್ಷ ನನಗೆ ಯಾವ ಜವಾಬ್ದಾರಿ ನೀಡುತ್ತದೆಯೋ ಅದನ್ನು ನಾನು ನಿಭಾಯಿಸುತ್ತೆನೆ. ಈಗಾಗಲೇ ನಮ್ಮ ಪಕ್ಷದ ನಾಯಕರು ನನಗೆ ಮೂಲ ಸೌಕರ್ಯ ಅಭಿವೃದ್ಧಿ ನಿಗಮ ಮಂಡಳಿ ಜವಾಬ್ದಾರಿಯ ಜೊತೆಗೆ ಸಮಾಜದ ಕಮಿಟಿ ಸದಸ್ಯನಾಗಿ ಮಾಡಿ ಜವಾಬ್ದಾರಿ ನೀಡಿದ್ದಾರೆ. ಇದನ್ನ ಹೊರತು ಇನ್ನೂ ಹೆಚ್ಚಿನ ಜವಾಬ್ದಾರಿ ನೀಡಿದ್ದರೆ ನಿಭಾಯಿಸುತ್ತೇನೆ. ಅದೂ ನಮ್ಮ ನಾಯಕರಿಗೂ ಗೊತ್ತಿದೆ, ಅಲ್ಲದೇ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಲ್ಲಿ ನಮ್ಮ ವರಿಷ್ಠರು ರಾಜ್ಯ ದೇಶಕ್ಕೆ ಒಳ್ಳೆಯದಾಗುವ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button