Breaking NewsLatestರಾಷ್ಟ್ರೀಯಸುದ್ದಿ

ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಮಾರಾಟಕ್ಕೆ ಕೇಂದ್ರ ಸರ್ಕಾರ ಸಿದ್ಧತೆ

ನವದೆಹಲಿ: ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಟೆಲಿಕಾಂ ಸಂಸ್ಥೆಗಳ ಸೊತ್ತುಗಳನ್ನು ಮೀಸಲು ಬೆಲೆ ಸುಮಾರು 970 ಕೋಟಿ ರೂಪಾಯಿಗೆ ಮಾರಾಟ ಮಾಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿರುವುದು ಡಿಐಪಿಎಎಂ ವೆಬ್​​ಸೈಟ್​​​ನಲ್ಲಿ ಅಪ್ಲೋಡ್ ಮಾಡಲಾದ ದಾಖಲೆಗಳಿಂದ ತಿಳಿದುಬಂದಿದೆ.

ಹೈದರಾಬಾದ್, ಚಂಡೀಗಡ, ಭಾವನಗರ್, ಕೋಲ್ಕತ್ತಾ ನಗರಗಳಲ್ಲಿ ಇರುವ ಬಿಎಸ್ಎನ್ಎಲ್ ಸೊತ್ತುಗಳನ್ನು ಮೀಸಲು ಬೆಲೆ ಸುಮಾರು 660 ಕೋಟಿ ರೂಪಾಯಿಗೆ ಹಾಗೂ ಮುಂಬೈನ ಗುರುಗಾಂವ್ ವಾಸರಿ ಹಿಲ್ ಬಳಿ ಇರುವ ಎಂಟಿಎನ್ಎಲ್ ಸೊತ್ತನ್ನು ಮೀಸಲು ಬೆಲೆ ಸುಮಾರು 310 ಕೋಟಿ ರೂಪಾಯಿಗೆ ಮಾರಾಟ ಮಾಡಲು ಹೂಡಿಕೆ ಹಾಗೂ ಸಾರ್ವಜನಿಕ ಸೊತ್ತು ನಿರ್ವಹಣೆ ಇಲಾಖೆ ತನ್ನ ವೆಬ್ಸೈಟಿನಲ್ಲಿ ಪಟ್ಟಿ ತಯಾರಿಸಿದೆ.

ಓಶಿವಾರದಲ್ಲಿರುವ ಎಂಟಿಎನ್ಎಲ್ ನ 20 ಫ್ಲಾಟ್ ಗಳನ್ನು ಮಾರಾಟಕ್ಕೆ ಇರಿಸಲಾಗಿದ್ದು ಇದರ ಈ ಹರಾಜು ಡಿಸೆಂಬರ್ 14ರಂದು ನಡೆಯಲಿದೆ.

Spread the love

Related Articles

Leave a Reply

Your email address will not be published. Required fields are marked *

Back to top button