Breaking NewsLatestಮನರಂಜನೆಸಿನಿಮಾಸೆಲೆಬ್ರಿಟಿಸ್ಯಾಂಡಲ್ ವುಡ್

ನಟ ಮೋಹನ್ ಬಾಬು ವಿರುದ್ಧ ಜಾತಿ ನಿಂದನೆ ಆರೋಪ: ಇದೆಲ್ಲಾ ಪ್ರೀ ಪ್ಲಾನ್ ಎಂದ ಹೇರ್ ಡ್ರೆಸ್ಸರ್

ತೆಲುಗು ಚಿತ್ರರಂಗದ ಸ್ಟಾರ್ ನಟ ಮೋಹನ್ ಬಾಬು ಕುಟುಂಬ ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಮಾ ಚುನಾವಣೆ ಕಾಂಟ್ರೋವರ್ಸಿ, ಚಿತ್ರರಂಗದ ಹಿರಿಯರು ಸೇರಿಕೊಂಡ ಸಭೆಗೆ ಮೋಹನ್ ಬಾಬು ನೋ ಎಂಟ್ರಿ, ಮೋಹನ್ ಬಾಬು ಸನ್ ಆಫ್ ಇಂಡಿಯಾ ಸಿನಿಮಾ ಕಲೆಕ್ಷನ್ ಹೀಗೆ ಸಾಕಷ್ಟು ಕಾರಣಗಳಿಗೆ ಸುದ್ದಿಯಾಗ್ತಿದ್ದ ಮೋಹನ್ ಬಾಬು ಇದೀಗ ಅವರ ಹೇರ್‌ ಡ್ರೆಸ್ಸರ್‌ ಕಾರಣಕ್ಕೆ ಸುದ್ದಿಯಾಗಿದ್ದಾರೆ.

ಕಳೆದ 10 ವರ್ಷಗಳಿಂದ ಮೋಹನ್ ಬಾಬು ಕುಟುಂಬಕ್ಕೆ ಹೇರ್‌ ಡ್ರೆಸ್ಸರ್‌ ಆಗಿ ನಾಗಸೀನು ಕೆಲಸ ಮಾಡುತ್ತಿದ್ದಾರೆ. ನಾಗಸೀನು ಕೆಲಸ ಮೆಚ್ಚಿಕೊಂಡಿದ್ದ ಮೋಹನ್ ಬಾಬು ಕುಟುಂಬ ಸಾಕಷ್ಟು ಸಂದರ್ಶನದಲ್ಲಿ ನಾಗಸೀನು ಅವರನ್ನ ಹಾಡಿ ಹೊಗಳಿದ್ದರು. ಆದರೆ ಇದೀಗ ಮೋಹನ್ ಬಾಬು ಪುತ್ರ ವಿಷ್ಣು ಮಂಚು ಪೊಲೀಸ್‌ ಠಾಣೆಯಲ್ಲಿ ನಾಗಸೀನು ವಿರುದ್ಧ ದೂರು ನೀಡಿದ್ದಾರೆ. ನಾವು ಬಳಸುತ್ತಿದ್ದ ಸುಮಾರು 5 ಲಕ್ಷ ಬೆಲೆ ಬಾಳುವು ಹೇರ್‌ ಸ್ಟೈಲಿಂಗ್ ವಸ್ತುಗಳನ್ನು ನಾಗಸೀನು ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ನಾಗಸೀನು ನಾನು ಯಾವುದೇ ಕಳ್ಳತನ ಮಾಡಿಲ್ಲ. ಇದೆಲ್ಲಾ ಬೇಕೆಂದು ಮೋಹನ್ ಬಾಬು ಮಾಡಿಸಿರುವುದು ಎಂದಿದ್ದಾರೆ.

ಮೋಹನ್ ಬಾಬು ನಟನೆಯ ಸನ್ ಆಫ್ ಇಂಡಿಯಾ ಸಿನಿಮಾದ ಕೆಲಕ್ಷನ್‌ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದೆ. ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಇದು ದೊಡ್ಡ ಲಾಸ್ ಎಂಬ ಮಾತು ಕೇಳಿ ಬರ್ತಿದೆ. ಈ ಕುರಿತಾಗಿ ಖಾಸಗಿ ಸಂದರ್ಶನದಲ್ಲಿ ಹೇರ್‌ ಡ್ರೆಸ್ಸರ್‌ ನಾಗಸೀನು ಅವರನ್ನು ಸಿನಿಮಾ ಬಗ್ಗೆ ಕೇಳಿದ್ದಾರೆ. ಮೋಹನ್ ಬಾಬು ಪರವಾಗಿ ಮಾತನಾಡಿಲ್ಲ, ಮೋಹನ್ ಬಾಬು ಅವರನ್ನ ಹೊಗಳಲಿಲ್ಲ ಅನ್ನೋ ಕಾರಣಕ್ಕೆ ನಾಗಸೀನು ಅವರನ್ನು ಮನೆಗೆ ಕರೆಸಿ ಎಲ್ಲಾ ಕೆಲಸದವರು ಮುಂದೆ ಮಂಡಿಯೂರಿ ಕ್ಷಮೆ ಕೇಳುವಂತೆ ಹೇಳಿದ್ದಾರೆ. ಕ್ಷಮೆ ಕೇಳಲು ನಾಗಸೀನು ನಿರಾಕರಿಸಿದಕ್ಕೆ ವಿಷ್ಣು ಮಂಚು ಹೀಗೆ ಮಾಡಿದ್ದಾರೆ ಎನ್ನಲಾಗ್ತಿದೆ.

ಮೋಹನ್ ಬಾಬು ಹಾಗೂ ವಿಷ್ಣು ಮಂಚು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ತಾಯಿಯ ಬಗ್ಗೆಯೂ ಅಕ್ಷೇಪಾರ್ಹ ಮಾತುಗಳನ್ನು ಆಡಿದ್ದಾರೆ. ಜೊತೆಗೆ ಜಾತಿ ನಿಂದನೆ ಮಾಡಿದ್ದಾರೆ ಎಂದು ನಾಗಸೀನು ದೂರಿದ್ದಾರೆ. ಜಾತಿ ನಿಂದನೆ ಮಾಡಿರುವುದಕ್ಕೆ ಮೋಹನ್ ಮತ್ತು ವಿಷ್ಣು ವಿರುದ್ಧ ದೂರು ದಾಖಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button