Latestಜಿಲ್ಲಾ ಸುದ್ದಿರಾಮನಗರ

ಮಹಾಜನ್ ವರದಿ ಜಾರಿಯಿಂದ ಮಾತ್ರ ಗಡಿ ಸಮಸ್ಯೆ ನಿವಾರಣೆ: ಶಂಕರ್ ಬಿದರಿ

ರಾಮನಗರ: ಬೆಳಗಾವಿಯಲ್ಲಿ ನಡೆಯುತ್ತಿರುವ ಘಟನೆ ಖಂಡನೀಯವಾಗಿದೆ, ಅಖಂಡ ಭಾರತದಲ್ಲಿ ಎಲ್ಲಾರೂ ಸೌಹರ್ದವಾಗಿ ಇರಬೇಕು, ಗಡಿವಿವಾದ ಬಗೆಹರಿಯುವ ನಿಟ್ಟಿನಲ್ಲಿ ಮಹಜನ್ ವರದಿ ಜಾರಿಯಾಗಬೇಕಿದೆ ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ. ಶಂಕರ್ ಬಿದರಿ ಹೇಳಿದರು.

ಮಾಗಡಿಯ ಕಲ್ಯಾಗೇಟ್‍ನಲ್ಲಿ ರೈತ ದಿನಾಚರಣೆ ಪ್ರಯುಕ್ತ ಹಸಿರು ಸೇನೆ ರೈತ ಸಂಘದ ವತಿಯಿಂದ 5ನೇ ವರ್ಷದ ಪ್ರಗತಿ ಪರ ರೈತರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇವರಾಜು ಅರಸು ರವರ ಕಾಲದಿಂದಲೂ ಒಕ್ಕೊರಲಾಗಿ ಮಹಾಜನ್ ವರದಿಯನ್ನು ಒಪ್ಪಿಕೊಂಡಿದ್ದು ಅದನ್ನು ಅನುಷ್ಠಾನ ಮಾಡಿ ಎಂದು ಕೇಳಿಕೊಳ್ಳುತ್ತಿದೆ, ಮಹಾರಾಷ್ಟ್ರ ಜೊತೆ ಮಾತನಾಡಿ ಮಹಾಜನ್ ವರದಿ ಅನುಷ್ಠಾನ ಮಾಡಿದರೆ ಸಮಸ್ಯೆ ಬಗೆಹರಿಯುತ್ತದೆ ಎಂದರು.

ಮಹಾರಾಷ್ಟ್ರದ ಗಡಿ ವಿಚಾರ ಒಂದೇ ಕೂಡ ಮಹಾಜನ್ ವರದಿಯಲ್ಲಿ ಉಲ್ಲೇಖವಾಗಿಲ್ಲ, ಕೇರಳ ಆಂಧ್ರಪ್ರದೇಶದ ಗಡಿ ಭಾಗಕ್ಕೂ ಸೇರಿದ್ದು ಕೇಂದ್ರ ಸರ್ಕಾರ ಸಂಬಂಧಪಟ್ಟ ರಾಜ್ಯಗಳ ಜೊತೆ ಚರ್ಚಿಸಿ ಅನುಷ್ಠಾನ ಮಾಡಿದಾಗ ಮಾತ್ರ ಗಡಿವಿವಾದ ಬಗೆಹರಿಯುತ್ತದೆ, ಕುವೆಂಪುರವರು ಹೇಳಿದಂತೆ ಭಾರತೀಯರೆಲ್ಲಾರೂ ಸೌಹಾರ್ದದಿಂದ ಬಾಳಬೇಕು, ದ್ವೇಷ ಅಸೂಯೆಯನ್ನು ಬಿಡಬೇಕು, ಮಹಾಜನ್ ವರದಿ ಅನುಷ್ಠಾನದಿಂದ ಮಾತ್ರ ಸಮಸ್ಯೆ ಬಗೆಹರಿಯಲು ಸಾಧ್ಯ ಎಂದು ತಿಳಿಸಿದರು.

ರೈತರು ಹೆಚ್ಚು ಸ್ವಾವಲಂಭಿಯಾಗಿ ತನ್ನದೆ ಆದ ಬ್ರಾಂಡ್‍ಗಳನ್ನು ಸೃಷ್ಠಿಸಿ ಬೆಲೆ ನಿಗಧಿ ಮಾಡುವಂತ ಸ್ಥಿತಿಗೆ ಬಂದಾಗ ಮಾತ್ರ ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುತ್ತದೆ, ದಿ.ನಂಜುಂಡಸ್ವಾಮಿ ಮತ್ತು ಪುಟ್ಟಣ್ಣಯ್ಯನವರು ರೈತರ ಪರವಾಗಿ ಸಾಕಷ್ಟು ಹೋರಾಟಗಳನ್ನು ಮಾಡಿದ್ದಾರೆ, ವಿದ್ಯಾವಂತರಾಗಿದ್ದ ನಂಜುಂಡಸ್ವಾಮಿರವರು ರಾಜಕೀಯಕ್ಕೆ ಬರದೆ ರೈತರ ಪರವಾಗಿಯೇ ಉತ್ತಮ ಹೆಸರನ್ನುಗಳಿಸಿದ್ದಾರೆಂದರು.

ಬೆಟ್ಟಹಳ್ಳಿ ಮಠಾಧ್ಯಕ್ಷ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ರೈತರು ಬೇಡುವ ಕೈಗಳಾಗಿಲ್ಲ ಸರ್ಕಾರ ರೈತರಿಗೆ ಕೊಡಬೇಕಾದ ಸೌಲಭ್ಯಗಳನ್ನು ಕೊಟ್ಟರೆ ಸಾಕು ರೈತರು ಏನನ್ನು ಬಯಸುವುದಿಲ್ಲ, 1964-65ರ ಸಮಯದಲ್ಲಿ ದೇಶದಲ್ಲಿ ಬರಗಾಲ ಎದುರಾದಾಗ ಅಮೆರಿಕಾದಿಂದ ಗೋಧಿಯನ್ನು ಆಮದು ಮಾಡಿಕೊಂಡಿದ್ದೇವು, ಆದರೆ ಈಗ ವಿದೇಶಗಳಿಗೆ ನಮ್ಮ ಆಹಾರವನ್ನು ರಫ್ತು ಮಾಡುವಷ್ಟು ಸುಸ್ಥಿತಿಗೆ ಬಂದಿದ್ದೇವೆ, ವೈಜಾನಿಕ ಬೇಸಾಯಕ್ಕೆ ರೈತರು ಒತ್ತು ಕೊಡಬೇಕು, ನೀರನ್ನು ಮಿತವಾಗಿ ಬಳಸುವುದರಿಂದ ನೀರಿನ ಅವಶ್ಯಕತೆ ಕಡಿಮೆಯಾಗುತ್ತದೆ, ಸಾಕಷ್ಟು ರೈತ ಸಂಘಗಳು ಒಗ್ಗಟ್ಟಾಗಿ ಹೋರಾಟ ಮಾಡಬೇಕು, ಆಗ ಮಾತ್ರ ನ್ಯಾಯ ಸಿಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ರೈತ ದಿನಾಚರಣೆ ಅಂಗವಾಗಿ, ಪ್ರಗತಿ ಪರ ರೈತರನ್ನು ಹಾಗೂ ರೈತ ಮಿತ್ರ ಪ್ರಶಸ್ತಿಯನ್ನು ನೀಡಲಾಯಿತು, 2022 ನೇ ಸಾಲಿನ ನೂತನ ದಿನದರ್ಶಿನಿ ಹಾಗೂ ಗುರುತಿನ ಚೀಟಿ ವಿತರಣೆ ಮಾಡಲಾಯಿತು.
.

Spread the love

Related Articles

Leave a Reply

Your email address will not be published. Required fields are marked *

Back to top button