Breaking NewsLatestಮೆಟ್ರೋರಾಜಕೀಯರಾಜ್ಯಸುದ್ದಿ

Yatnal: ಈಗಲೇ ಎಚ್ಚೆತ್ತುಕೊಂಡು ಸಂಪುಟ ವಿಸ್ತರಣೆ ಮಾಡಿ: ಶಾಸಕ ಯತ್ನಾಳ್ ಆಗ್ರಹ

ಬೆಂಗಳೂರು : ಕೆಲವರು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಭೇಟಿಯಾಗಿ ಟಿಕೆಟ್ ಬುಕ್ ಮಾಡಿದ್ದಾರೆ. ಚುನಾವಣೆ ಘೊಷಣೆಯಾದ ಬಳಿಕ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಗೆ ಓಡಿ ಹೋಗುತ್ತಾರೆ ಎಂದು ವಲಸಿಗ ಸಚಿವರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.

ಮಾಧ್ಯಮಗಳ ಜತೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಮಾಡುವುದಾದರೇ ಈಗಲೇ ಮಾಡಿ ಉತ್ತರ ಪ್ರದೇಶದಲ್ಲಿ ಆದ ರೀತಿ ಇಲ್ಲ ಆಗೋದು ಬೇಡ, ಇಲ್ಲಿ ಅಧಿಕಾರ ಅನುಭವಿಸಿ ಅಲ್ಲಿಗೆ ಹೋಗುವುದು ಬೇಡ. 15 ದಿನದೊಳಗೆ ಸಂಪುಟ ಪುನರಚನೆ ಮಾಡಲಿ ಆ ನಂತರ ಮಾಡಿದರೇ ಏನು ಉಪಯೋಗವಿದೆ. ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ಬೇಕು ಅಂತಾ ಹುಡುಕಿದರೇ ಸಿಗಲ್ಲ. ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತಾಗುತ್ತದೆ. ಹೀಗಾಗಿ ಈಗಲೇ ಎಚ್ಚೆತ್ತುಕೊಂಡು ಸಂಪುಟ ವಿಸ್ತರಣೆ ಮಾಡಬೇಕು ಎಂದು ಆಗ್ರಹಿಸಿದರು.

ಚುನಾವಣೆ ಘೋಷಣೆಯಾದ ಬಳಿಕ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಗೆ ಹೋಗುತ್ತಾರೆ. ಉತ್ತರ ಪ್ರದೇಶದಂತೆ ಎಲ್ಲರೂ ಹೊರ ಹೋಗುತ್ತಾರೆ. ಹೊರಗಿನಿಂದ ಬಂದವರಿಗೆ ಪಕ್ಷ ನಿಷ್ಟೆ ಇಲ್ಲ ಎನ್ನಲ್ಲ. ಕೆಲವರಿಗೆ ಪಕ್ಷ ನಿಷ್ಠೆ ಇಲ್ಲ. ನಿಷ್ಠಾವಂತರಿಗೆ ಅವಕಾಶ ನೀಡಿ ಎಂದು ಯತ್ನಾಳ್ ಒತ್ತಾಯಿಸಿದರು.

ಕೆಲವರಿಗೆ 10 ಓಟ್ ತರುವ ಯೋಗ್ಯತೆ ಇಲ್ಲ :

ಕೆಲವರಿಗೆ 10 ಓಟ್ ತರುವ ಯೋಗ್ಯತೆ ಇಲ್ಲ. ಅಧಿಕಾರಕ್ಕೆ ಮಠ ಕಟ್ಟುತ್ತಿದ್ದಾರೆ. ಅಂತಹವರನ್ನು ಮಂತ್ರಿ ಮಾಡಿದ್ದಾರೆ. ಇವರಿಂದ ಉಪಯೋಗ ಇಲ್ಲ. ಎಂದು ಪರೋಕ್ಷವಾಗಿ ಸಚಿವ ಮುರುಗೇಶ ನಿರಾಣಿ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ ವಾಗ್ದಾಳಿ ನಡೆಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button