ಲಂಡನ್: ವಿಶ್ವದಾದ್ಯಂತ ಕಾಡುತ್ತಿರುವ ಕೋವಿಡ್ ರೂಪಾಂತರಿಯ ಒಮಿಕ್ರಾನ್ ಸಾಮಾನ್ಯ ನೆಗಡಿ ಅಲ್ಲ. ಹೀಗಾಗಿ ಜನತೆ ಇದನ್ನು ಲಘುವಾಗಿ ಪರಿಗಣಿಸಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳುವಳಿಕೆ ನೀಡಿದೆ. ಒಮಿಕ್ರಾನ್ ಮುಖ್ಯ ಲಕ್ಷಣಗಳೆಂದರೆ ಆಯಾಸ, ಕೆಮ್ಮು ಮೂಗು ಸುರಿಯುವುದು, ಸಾಮಾನ್ಯವಾಗಿ ಕಾಡುವ ನೆಗಡಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ದಕ್ಷಿಣ ಆಫ್ರಿಕಾ ಅಮೆರಿಕ ಹಾಗೂ ಇಂಗ್ಲೆಂಡ್ ನಲ್ಲಿ ನಡೆಸಿದ ಅಧ್ಯಯನಗಳ ವರದಿ ಪ್ರಕಾರ ಈ ಪ್ರಮುಖ ನಾಲ್ಕು ಲಕ್ಷಣಗಳನ್ನು ಹೊಂದಿದೆ. ಸೋಂಕು ಬಹಳ ವೇಗವಾಗಿ ಹರಡಬಹುದಾದರೂ ಆಸ್ಪತ್ರೆಗೆ ಸೇರುವಂತಹ ಸನ್ನಿವೇಶ ನಿರ್ಮಾಣವಾಗುವುದು ಬಹಳ ಕಡಿಮೆ, ಮತ್ತು ಸಾವಿನ ಪ್ರಕರಣಗಳು ಸಹ ಬಡ ಕಡಿಮೆ ಪ್ರಮಾಣದಲ್ಲಿರುತ್ತದೆ ಎಂಬ ಅಂಶವನ್ನು ಹೊರಹಾಕಿದೆ.
ಇಂಗ್ಲೆಂಡ್ ನಲ್ಲಿ ಈವರೆಗೆ 14 ಜನರು ಮೃತಪಟ್ಟಿದ್ದಾರೆ. ಅಮೆರಿಕಾ ಮತ್ತು ದಕ್ಷಿಣ ಕೋರಿಯಾದಲ್ಲಿ ತಲಾ ಒಬ್ಬರು ಮಾತ್ರ ಮೃತಪಟ್ಟಿದ್ದಾರೆ. ಸಾಮಾನ್ಯವಾಗಿ ಎರಡು ಡೋಸ್ ಲಸಿಕೆ ಪಡೆದವರು ಒಮಿಕ್ರಾನ್ ನಿಂದ ಸಾವನ್ನಪ್ಪುವ ಸಂಭವ ಬಹಳ ಕಡಿಮೆ ಎಂಬುದು ಈವರೆಗಿನ ವೈದ್ಯಕೀಯ ಅಧ್ಯಯನಗಳಿಂದ ಗೊತ್ತಾಗಿದೆ ಎಂಬ ಹೊಸ ವಿಚಾರ ಬಹಿರಂಗಪಡಿಸಿದೆ.



