ವಕೀಲ ಜಗದೀಶ್ಗೆ 14 ದಿನ ನ್ಯಾಯಾಂಗ ಬಂಧನ

ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ವಿರುದ್ಧ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ್ದ ವಕೀಲ ಜಗದೀಶ್ರನ್ನ ಪೊಲೀಸರು ಬಂಧಿಸಿದ್ದಾರೆ. ಫೆಬ್ರವರಿ 11ರಂದು ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ವಕೀಲರ ಗುಂಪು ನನ್ನ ಹಾಗು ನನ್ನ ಮಗನ ಮೇಲೆ ಹಲ್ಲೆ ನಡೆಸಿದ್ದಾರೆ. ಇಷ್ಟಾದರೂ ಅಲ್ಲಿದ್ದ ಪೊಲೀಸರು ರಕ್ಷಣೆ ಮಾಡಿಲ್ಲ. ಎಲ್ಲರೂ ಗೂಂಡಾಗಳ ರೀತಿ ವರ್ತಿಸಿದ್ದಾರೆ ಎಂದು ಜಗದೀಶ್ ಆಕ್ರೋಶ ಹೊರ ಹಾಕಿದ್ದರು.
ಈ ಬಗ್ಗೆ ಸೋಷಿಯಲ್ ಮೀಡಿಯಾ ಲೈವ್ ಮೂಲಕ ಜಗದೀಶ್ ವಾಗ್ದಾಳಿ ನಡೆಸಿದ್ದಾರೆ. ನನ್ನ ಮಗನ ಮೇಲೆ ಹಲ್ಲೆಯಾಗಿದೆ. ಅವನು ವಿಕ್ಟೋರಿಯಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಮಲ್ ಪಂಥ್, ಪ್ರವೀಣ್ ಸೂದ್ ರಾಜೀನಾಮೆ ತೆಗೆದುಕೊಂಡು ಮನೆಗೆ ಹೋಗ್ರಯ್ಯಾ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ನೀವೆಲ್ಲಾ ಯೂನಿಫಾರಂ ಹಾಕೊಂಡಿರುವ ಗೂಂಡಾಗಳು. ಮಗನಿಗೆ ಏನಾದರೂ ಆದರೆ ನಿಮಗೆ ನೇಣು ಹಾಕಿಸಿಲ್ಲ ಅಂದರೆ ನಾನು ಜಗದೀಶ್ ಅಲ್ಲ ಎಂದಿದ್ದಾರೆ. 40 ಜನಗಳ ಮೇಲೆ ಅಟ್ಯಾಕ್ ಆಗಿದೆ. ರೌಡಿ ಥರ ವರ್ತಿಸಿದ್ದಾರೆ. ವಕೀಲರನ್ನು ಹೇಗೆ ನೋಡ್ತಿದ್ದೀರಾ ಎಂಬುದರ ಫೂಟೇಜ್ ನನ್ನ ಬಳಿ ಇದೆ. ಕರ್ನಾಟಕದಲ್ಲಿ ಪೊಲೀಸ್, ಕಾನೂನು ಇಲ್ಲ. ಎಲ್ಲಾ ಗೂಂಡಾಗಳೇ ಇರೋದು. ಮೊದಲು ತಂದೆ ನಾನು. ಆಮೇಲೆ ಅಡ್ವೊಕೇಟ್ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಜಗದೀಶ್ ಅವರನ್ನು ಬಂಧಿಸಲಾಗಿದೆ.
ವಕೀಲರ ಮೇಲೆ ಹಲ್ಲೆ ನಡೆಸಿದ ಆರೋಪ
ವಕೀಲರ ಮೇಲೆ ಜಗದೀಶ್ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗುತ್ತಿ. ಬಾರ್ ಕೌನ್ಸಿಲ್ ಅಧ್ಯಕ್ಷ ವಿವೇಕ್ ರೆಡ್ಡಿ ಎಂಬುವವರು ದೂರು ನೀಡಿದ್ದರು. ಜಗದೀಶ್ ಗುಂಪು ಕಟ್ಟಿಕೊಂಡು ಬಂದು ಕೊಲೆಗೆ ಯತ್ನಿಸಿದ್ದಾರೆ. ಅಲ್ಲದೇ ಕೋರ್ಟ್ ಆವರಣದ ಒಳಗೆ ನುಗ್ಗಿ ದಾಂಧಲೆ ಮಾಡಿದ್ದಾರೆ. ಹೊರಗಿನವರನ್ನು ಕರೆತಂದು ಲಾಯರ್ಗಳ ಮೇಲೆ ದಾಳಿ ಮಾಡಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವಕೀಲ ವಿವೇಕ್ ರೆಡ್ಡಿ ದೂರಿಗೆ ಪ್ರತಿದೂರು ದಾಖಲಿಸಿದ ಜಗದೀಶ್ ಕೆಲವರು ತನ್ನ ಮೇಲೆ ಹಾಗೂ ನನ್ನ ಪುತ್ರ ಸೇರಿದಂತೆ ಆಪ್ತರ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದರು. ಇದಾದ ಬಳಿಕ ಶನಿವಾರ ವಕೀಲರ ಸಂಘ ಪೊಲೀಸ್ ಆಯುಕ್ತರಿಗೆ ದೂರು ನೀಡಿತ್ತು.
ಬಾರ್ ಕೌನ್ಸಿಲ್ ನೀಡಿದ ಮತ್ತೊಂದು ದೂರು ಆಧರಿಸಿ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಸೂಚನೆ ನೀಡಿದ್ದಾರೆ. ಹೀಗಾಗಿ ಕಮಿಷನರ್ ಸೂಚನೆಯಂತೆ ಬೆಂಗಳೂರಿನ ಹಲಸೂರು ಗೇಟ್ ಠಾಣಾ ಪೊಲೀಸರು ವಕೀಲ ಜಗದೀಶ್ರನ್ನ ಬಂಧಿಸಿದ್ದಾರೆ.
14 ದಿನಗಳ ಕಾಲ ನ್ಯಾಯಾಂಗ ಬಂಧನ
ವಕೀಲ ಜಗದೀಶ್ ವೈದ್ಯಕೀಯ ಪರೀಕ್ಷೆ ಮುಕ್ತಯವಾಗಿದ್ದು ಕೊವಿಡ್ ವರದಿ ನೆಗೆಟಿವ್ ಬಂದಿದೆ. ಒಂದನೇ ಎಸಿಎಂಎಂ ನ್ಯಾಯಾಧೀಶರು ವಕೀಲ ಜಗದೀಶ್ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ಮಾಡಿ ಆದೇಶ ನೀಡಿದ್ದಾರೆ.
