Breaking NewsLatestಮೆಟ್ರೋರಾಜ್ಯರಾಷ್ಟ್ರೀಯಸುದ್ದಿ

ಪೊಲೀಸ್ ಪಡೆಗಳ ಆಧುನೀಕರಣ, ಸುಧಾರಣೆಗೆ ಕೇಂದ್ರದಿಂದ “ಅಂಬ್ರೆಲ್ಲಾ” ಯೋಜನೆ

ನವದೆಹಲಿ: ಮುಂದಿನ ಐದು ವರ್ಷಗಳಲ್ಲಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪೊಲೀಸ್ ಪಡೆಗಳ ಆಧುನೀಕರಣ ಮತ್ತು ಸುಧಾರಣೆಗಾಗಿ 26,275 ಕೋಟಿ ರೂಪಾಯಿ ವೆಚ್ಚದ ಮಹತ್ವದ ಅಂಬ್ರೆಲ್ಲಾ ಯೋಜನೆಗೆ ಕೇಂದ್ರ ಸರ್ಕಾರ ಭಾನುವಾರ ಅನುಮೋದನೆ ನೀಡಿದೆ.

2021-22ರಿಂದ 2025-26ರ ಅವಧಿಯಲ್ಲಿ ಪೊಲೀಸ್ ಪಡೆಗಳ ಆಧುನೀಕರಣದ(ಎಂಪಿಎಫ್) ಅಂಬ್ರೆಲ್ಲಾ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಈ ಯೋಜನೆ ಎಲ್ಲಾ ಸಂಬಂಧಿತ ಉಪ ಯೋಜನೆಗಳನ್ನು ಒಳಗೊಂಡಿರುತ್ತದೆ.

ಎಂಪಿಎಫ್ ಯೋಜನೆ ಅಡಿ ಆಂತರಿಕ ಭದ್ರತೆ, ಕಾನೂನು ಮತ್ತು ಸುವ್ಯವಸ್ಥೆ, ಪೊಲೀಸರಿಂದ ಆಧುನಿಕ ತಂತ್ರಜ್ಞಾನ ಅಳವಡಿಕೆ, ಮಾದಕ ದ್ರವ್ಯ ನಿಯಂತ್ರಣಕ್ಕಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಹಾಯ ಮಾಡುವುದು ಮತ್ತು ದೇಶದಲ್ಲಿ ದೃಢವಾದ ಫೊರೆನ್ಸಿಕ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಮೂಲಕ ಅಪರಾಧ ನ್ಯಾಯ ವ್ಯವಸ್ಥೆಯನ್ನು ಬಲಪಡಿಸಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯ ಪೊಲೀಸ್ ಪಡೆಗಳ ಆಧುನೀಕರಣಕ್ಕೆ ಕೇಂದ್ರ 4,486 ಕೋಟಿ ರೂಪಾಯಿ ನೀಡಲಿದೆ.

ಸಂಪನ್ಮೂಲಗಳ ಆಧುನೀಕರಣದ ಮೂಲಕ ವೈಜ್ಞಾನಿಕ ಮತ್ತು ಸಮಯೋಚಿತ ತನಿಖೆಗೆ ಸಹಾಯ ಮಾಡಲು ಕಾರ್ಯಾಚರಣೆಯ ಸ್ವತಂತ್ರ ಉನ್ನತ ಗುಣಮಟ್ಟದ ನ್ಯಾಯ ವಿಜ್ಞಾನದ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವುದು ಯೋಜನೆಯ ಪ್ರಮುಖಉದ್ದೇಶಗಳಲ್ಲೊಂದಾಗಿದೆ.

ಫೊರೆನ್ಸಿಕ್ ಸಾಮರ್ಥ್ಯಗಳ ಆಧುನೀಕರಣಕ್ಕಾಗಿ ಕೇಂದ್ರದ ಈ ಯೋಜನೆಯಡಿ 2,080.50 ಕೋಟಿ ರೂಪಾಯಿಗೆ ಸರ್ಕಾರ ಅನುಮೋದನೆ ನೀಡಿದೆ.

ಭಾರತೀಯ ರಿಸರ್ವ್ ಬೆಟಾಲಿಯನ್/ವಿಶೇಷ ಭಾರತೀಯ ರಿಸರ್ವ್ ಬೆಟಾಲಿಯನ್ ಗಳನ್ನು ಹೆಚ್ಚಿಸಲು ಸರ್ಕಾರ 350 ಕೋಟಿ ರೂಪಾಯಿ ನೀಡಿದೆ. ಜತೆಗೆ 50 ಕೋಟಿ ರೂಪಾಯಿ ವೆಚ್ಚದಲ್ಲಿ ಮಾದಕ ದ್ರವ್ಯ ನಿಯಂತ್ರಣಕ್ಕಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೆರವು ನೀಡುವ ಕೇಂದ್ರ ವಲಯದ ಯೋಜನೆಯನ್ನೂ ಸರ್ಕಾರ ವಿಸ್ತರಿಸಿದೆ.

Spread the love

Related Articles

Leave a Reply

Your email address will not be published. Required fields are marked *

Back to top button