Breaking NewsLatestರಾಷ್ಟ್ರೀಯ

ಅಡ್ವಾಣಿ ಅವರಿಗೆ ಕೇಕ್ ನೀಡಿ, ಜನ್ಮದಿನದ ಶುಭ ಕೋರಿದ ಸುಷ್ಮಾ ಸ್ವರಾಜ್ ಪುತ್ರಿ

ನವದೆಹಲಿ: 94ನೇ ವರ್ಷಕ್ಕೆ ಕಾಲಿಟ್ಟ ಬಿಜೆಪಿ ಹಿರಿಯ ನಾಯಕ ಎಲ್​ಕೆ ಅಡ್ವಾಣಿ ಅವರ ನಿವಾಸಕ್ಕೆ ತೆರಳಿದ ಮಾಜಿ ಕೆಂದ್ರ ಸಚಿವೆ ಸುಷ್ಮಾ ಸ್ವರಾಜ್ ಮಗಳು ಬಾನ್ಸುರಿ ಸ್ವರಾಜ್, ಅಡ್ವಾಣಿ ಅವರಿಗೆ ಶುಭ ಕೋರಿದರು. ಚಾಕೊಲೇಟ್ ಕೇಕ್​ನ್ನೂ ಕೊಂಡೊಯ್ಯುವ ಮೂಲಕ ಅವರು, ತಮ್ಮ ತಾಯಿ ಹಾಕಿದ್ದ ಸಂಪ್ರದಾಯವನ್ನು ವರ್ಷದಂತೆ ಈ ವರ್ಷವೂ ಪಾಲಿಸಿದರು.

ಅಡ್ವಾಣಿ ಅವರನ್ನು ಭೇಟಿಯಾಗಿ ಶುಭ ಕೋರಿದ ಬಳಿಕ ಅವರೊಂದಿಗಿನ ಚಿತ್ರವನ್ನು ಬಾನ್ಸುರಿ ಸ್ವರಾಜ್ ಟ್ವೀಟ್ ಮಾಡಿದ್ದಾರೆ.

ಹಿರಿಯ ನಾಯಕರಾದ ಅಡ್ವಅಣಿ ಅವರಿಗೆ ಅವರ ಹುಟ್ಟಿದ ದಿನದಂದು ಚಾಕೊಲೇಟ್ ಕೇಕ್ ನೀಡುವ ತಮ್ಮ ತಾಯಿಯವರ ಈ ಸಿಹಿ ಸಂಪ್ರದಾಯ ಮುಂದುವರಿದುಕೊಂಡು ಬರುತ್ತಿದೆ ಎಂದು ಅವರು ಹೇಳಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button