ಬ್ಯಾಂಕ್ ಗ್ರಾಹಕರ ಗಮನಕ್ಕೆ; ವಾರದಲ್ಲಿ 2 ದಿನ ಮಾತ್ರ ಬ್ಯಾಂಕ್ ಓಪನ್

ಬೆಂಗಳೂರು: ಬ್ಯಾಂಕ್ ಗ್ರಾಹಕರೇ ಎಚ್ಚರ. ಮುಂದಿನ ವಾರ ಬ್ಯಾಂಕ್ ಸೇವೆಯಲ್ಲಿ ಅಡೆಚಣೆ ಉಂಟಾಗಲಿದೆ. ವಾರದಲ್ಲಿ 2 ದಿನ ಮಾತ್ರ ಬ್ಯಾಂಕ್‌ಗಳು ಓಪನ್ ಇರಲಿದೆ. ಮಾರ್ಚ್ 27 ರಿಂದ 29ರ ವರೆಗೆ ಬ್ಯಾಂಕ್ ನೌಕರರ ಮುಷ್ಕರ ಇರಲಿದೆ. ಹೀಗಾಗಿ ಸೋಮವಾರ, ಮಂಗಳವಾರ ಬ್ಯಾಂಕ್ ಕ್ಲೋಸ್ ಆಗಿರಲಿದೆ. ನಡುವೆ ಮಾರ್ಚ್ 30 ಮತ್ತು 31 ರಂದು ಬ್ಯಾಂಕ್ ಓಪನ್ ಇರಲಿದೆ. ಬಳಿಕ ಮತ್ತೆ ಏಪ್ರಿಲ್ 1 ರಂದು ಹೊಸ ಆರ್ಥಿಕ ವರ್ಷ ಆರಂಭ ಹಿನ್ನೆಲೆ ಗ್ರಾಹಕ ಸೇವೆ ಲಭ್ಯ ಇರುವುದಿಲ್ಲ. ಏಪ್ರಿಲ್ 1 ರಂದು ಹೊಸ ಆರ್ಥಿಕ ವರ್ಷ ಆರಂಭ ಆದ್ದರಿಂದ ಬ್ಯಾಂಕ್ ಓಪನ್ ಇದ್ದರೂ ಗ್ರಾಹಕ ಸೇವೆ ಲಭ್ಯ ಇರುವುದಿಲ್ಲ. ಮತ್ತೆ ಏಪ್ರಿಲ್ 2 ರಂದು ಯುಗಾದಿ ಹಿನ್ನೆಲೆ ಬ್ಯಾಂಕ್‌ಗೆ ರಜೆ ಇರಲಿದೆ. ಹೀಗಾಗಿ ಒಟ್ಟಾರೆ ಮುಂದಿನ ವಾರ 2 ದಿನ ಮಾತ್ರ ಬ್ಯಾಂಕ್ ಓಪನ್ ಇರಲಿದೆ.
ಬ್ಯಾಂಕ್ ಸೇವೆಗಳು ಜನಸಾಮಾನ್ಯರಿಗೆ ಅತಿ ಮುಖ್ಯವಾಗಿ ಇರುತ್ತದೆ. ಹಣ ಪಡೆದುಕೊಳ್ಳಲು, ಕಳುಹಿಸಲು, ಸಾಲ, ಇತರ ವ್ಯವಹಾರ ನಡೆಸಲು ಬ್ಯಾಂಕ್ ಸೇವೆ ಅಗತ್ಯ ಇರುತ್ತದೆ. ಈ ಮಧ್ಯೆ, ಸಾಲು ಸಾಲು ಬ್ಯಾಂಕ್ ರಜೆ ಇರುವುದರಿಂದ ತುರ್ತು ಕೆಲಸಗಳನ್ನು ಶೀಘ್ರ ಪೂರೈಸುವುದು ಒಳ್ಳೆಯದು. ಮುಂದಿನ ವಾರ ಎರಡು ದಿನ ಮಾತ್ರವೇ ಬ್ಯಾಂಕ್ ಓಪನ್ ಇರುವುದರಿಂದ ಈಗಲೇ ಬೇಕಾದ ಕೆಲಸ ಮಾಡಿಕೊಳ್ಳಬಹುದು. ಮತ್ತು ಮುಂದಿನ ವಾರಕ್ಕೆ ಬ್ಯಾಂಕ್ ಕೆಲಸಗಳನ್ನು ಉಳಿಸದೇ ಇರಬಹುದು.
