ಬಾದಾಮಿ ಜನ ಬಹಳ ಒಳ್ಳೆಯವರು, ಚಾಮುಂಡೇಶ್ವರಿ ಜನ ಅಷ್ಟೊಂದು ಅಭಿವೃದ್ಧಿ ಮಾಡಿದರೂ ಸೋಲಿಸಿದರು: ಸಿದ್ದರಾಮಯ್ಯ

ಬಾಗಲಕೋಟೆ: ಬಾದಾಮಿ ಜನ ಬಹಳ ಒಳ್ಳೆಯವರು. ನಾನು ಒಂದಿನ ಬಂದು ನಾಮಿನೇಷನ್ ಹಾಕಿದೆ, ಒಂದಿನವಷ್ಟೆ ಪ್ರಚಾರಕ್ಕೆ ಬಂದಿದ್ದೇ. ಬಾದಾಮಿಯಲ್ಲಿ ಜನ ನನ್ನನ್ನು ಗೆಲ್ಲಿಸಿಬಿಟ್ರು. ಆ ಚಾಮುಂಡೇಶ್ವರಿ ಜನ ಅಷ್ಟೊಂದು ಅಭಿವೃದ್ಧಿ ಮಾಡಿದರೂ ಸೋಲಿಸಿ ಬಿಟ್ರು ಎಂದು ಚಾಮುಂಡೇಶ್ವರಿ ಸೋಲನ್ನು ಸಿದ್ದರಾಮಯ್ಯ ಮೆಲುಕು ಹಾಕಿದರು.
ಬಾದಾಮಿ ತಾಲೂಕಿನ ಬನಶಂಕರಿಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ತ್ರಿಸ್ಟಾರ್ ಹೊಟೇಲ್ ನಿರ್ಮಾಣದ ಅಡಿಗಲ್ಲು ಸಮಾರಂಭದಲ್ಲಿ ಮಾತನಾಡಿದ ಅವರು, ಎರಡು ಬಾರಿ ಮಾತ್ರ ವರುಣಾ ಜನ ಗೆಲ್ಲಿಸಿದ್ರು. ಈಗ ನಮ್ಮ ಹುಡುಗನ ಗೆಲ್ಲಿಸಿದ್ದಾರೆ. ಈ ಕಾ ಪು ಸಿದ್ದಲಿಂಗಸ್ವಾಮಿ ಇದಾನಲ್ಲ ಇವನು ನನ್ನ ವಿರುದ್ಧ ಸ್ಪರ್ಧಿಸಿದ್ರು. 2013ರಲ್ಲಿ ಏನಯ್ಯಾ ಸಿದ್ದಲಿಂಗಸ್ವಾಮಿ ಎಂದು ಕೇಳಿದ ಸಿದ್ದರಾಮಯ್ಯ. ರಾಜಕಾರಣಿಗಳು ಹೇಗಿರುತ್ತಾರೋ ಹಾಗೆ ಜನ ಇರುತ್ತಾರೆ ಎಂದು ಹೇಳಿದ ಸಿದ್ದರಾಮಯ್ಯ, ಚಾಮುಂಡೇಶ್ವರಿ ಸೋಲು ಪ್ರಸ್ತಾಪಿಸಿದರು.
ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಬರಬಾರದು. ನಾವು ವೈಯಕ್ತಿಕವಾಗಿ ಯಾರೂ ವೈರಿ ಅಲ್ಲ. ಚುನಾವಣೆ ಬಂದಾಗ ಚುನಾವಣೆ ಮಾಡೋಣ. ಮತ್ತೇ ಇಲೆಕ್ಷನ್ ಬಂತು ಇನ್ನೂ ಒಂದುವರೆ ವರ್ಷವಷ್ಟೆ. ಒಂದೇ ಒಂದು ತಾಪತ್ರಯ ಎಂದರೆ ನಾನು ಬಾದಾಮಿಗೆ ಪದೇ ಪದೇ ಬರೋಕೆ ಆಗ್ತಿಲ್ಲ. ನಾನು ಬಾದಾಮಿ ವಾಸಿನೂ ಅಲ್ಲ. ಸಂಸದ ಪಿಸಿ ಗದ್ದಿಗೌಡ ಬಾದಾಮಿ ವಾಸಿ. ಹಾಗಂತ ಬಾದಾಮಿ ಅಭಿವೃದ್ಧಿಯಲ್ಲಿ ನಾನು ಹಿಂದೆ ಬಿದ್ದಿಲ್ಲ. ಮುಂಚೂಣಿಯಲ್ಲಿದ್ದೇನೆ. ಬಾದಾಮಿ ಅಭಿವೃದ್ಧಿ ಯಲ್ಲಿ ಮಾದರಿ ಕ್ಷೇತ್ರ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬಾದಾಮಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಶ್ವದ ಭೂಪಟದಲ್ಲಿದೆ. ಪ್ರವಾಸಿ ತಾಣದ ಅಭಿವೃದ್ಧಿಗೆ ವಿಶೇಷ ಒತ್ತು ಕೊಡಲಾಗುವುದು. ಆನಂದ್ ಸಿಂಗ್ ನನ್ನ ಆತ್ಮೀಯ ಸ್ನೇಹಿತ. ಪ್ರವಾಸೋದ್ಯಮ ಸಚಿವರಾಗಿ ಇರುವವರಿಗೂ ಬಾದಾಮಿ ಪ್ರವಾಸಿ ತಾಣ ಅಭಿವೃದ್ಧಿಗೆ ಅನುದಾನ ಕೊಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.
ಏನಯ್ಯ ಅನುದಾನ ಕೊಡ್ತಿಯಿಲ್ವೋ ಎಂದು ಆನಂದ್ ಸಿಂಗ್ ಅವರನ್ನು ಸಿದ್ದರಾಮಯ್ಯ ಕೇಳಿದರು. ಕೊಡುತ್ತೇನೆ ಎಂದು ತಿಳಿಸಿದರು.



