ತುಂಬಿ ಹರಿಯುತ್ತಿರುವ ನದಿಗಳು; ಮಹಾರಾಷ್ಟ್ರ ಕರ್ನಾಟಕ ಸಂಪರ್ಕ ಕಡಿತ

ವರದಿ: ಮಲ್ಲಿಕ್ ಬೆಳಗಲಿ
ಬೆಳಗಾವಿ: ನಿಪ್ಪಾಣಿಯ ಹತ್ತಿರ ವೇದಗಂಗಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದಿದ್ದರಿಂದ ರಾ. ಹೆದ್ದಾರಿ 4ರ ಮೇಲೆ ಮಹಾರಾಷ್ಟ್ರ ಕಡೆಯಿಂದ ಬರುವ ವಾಹನಗಳನ್ನು ಕೊಗನೊಳ್ಳಿ ಚೆಕ್ ಪೋಸ್ಟ್ ನಿಂದ ಪೊಲೀಸರು ವಾಪಸ್ ಕಳುಹಿಸುತ್ತಿದ್ದಾರೆ.
ಸ್ಥಳದಲ್ಲಿ ಮೊಕ್ಕಾಂ ಹೂಡಿರುವ ಪಿಎಸ್ಐ ಡಿಸಿಐಬಿ ಹಾಗೂ ರಕ್ಷಣಾ ಪಡೆಯ ಅಧಿಕಾರಿಗಳು ಮದ್ಯ ರಾತ್ರಿ 3 ಗಂಟೆಯಿಂದ ಕರ್ನಾಟಕ ಮಹಾರಾಷ್ಟ್ರ ಸಂಪರ್ಕ ಹೊಂದಿದ್ದ NH4 ಹೆದ್ದಾರಿಯನ್ನ ತಾತ್ಕಾಲಿಕವಾಗಿ ಕ್ಲೋಸ್ ಮಾಡಿದ್ದಾರೆ.

ಕಳೆದ ಮೂರ್ನಾಲ್ಕು ದಿನದಿಂದ ಹೆಚ್ಚು ಮಳೆ ಸುರಿಯುತ್ತಿದ್ದು, ವೇದಾಗಂಗಾ, ದೂದ್ಗಂಗಾ, ಹಿರಣ್ಯಕಶಿಪು ನದಿಗಳು ತುಂಬಿ ಹರಿಯುತ್ತಿವೆ. 60 ಗ್ರಾಮಗಳ ಸಂಪರ್ಕ ಕಡಿತಗೊಂಡಿದ್ದು,ವಿದ್ಯುತ್ ವ್ಯತ್ಯಯ ಸೇರಿದಂತೆ ಅನೇಕ ತೊಂದರೆಗಳು ಈಗಾಗಲೇ ಆರಂಭವಾಗಿವೆ.

ಬೆಳಗಾವಿ ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ನದಿಗಳು ರಸ್ತೆಯ ಮೇಲೆ ಹರಿಯುತ್ತಿವೆ, ಸದ್ಯ ಹೀಗೆ ಮುಂದುವರೆದರೆ ಮಹಾರಾಷ್ಟ್ರ ಸಂಪರ್ಕ್ ಸಾಧ್ಯವಿಲ್ಲ ಆಗಿದ್ದಲ್ಲರಿಂದ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುಂಜಾಗೃತಾ ಕ್ರಮವಾಗಿ ವಾಹನಗಳನ್ನು ಮಾರ್ಗ ಬದಲಿಸುವಂತೆ ಸೂಚನೆ ನೀಡಿದ್ದಾರೆ. ನಿಪ್ಪಾಣಿ ತಾಲ್ಲೂಕಿನ ಯಮಗರ್ನಿ ಹಳ್ಳಿಯ ರಸ್ತೆ ಸಂಪೂರ್ಣ ಬಂದ್ ಆಗಿದ್ದು,ಅನ್ಯ ಮಾರ್ಗವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ
ತುಮಕೂರು, ಚಿತ್ರದುರ್ಗ,ದಾವಣಗೆರೆ, ಹಾವೇರಿ, ಧಾರವಾಡ ದಿಂದ ಬರುವ ಮಹಾರಾಷ್ಟ್ರಕ್ಕೆ ತೆರಳುವ ವಾಹನಗಳನ್ನು ಬಿಜಾಪುರ ಅಥವಾ ಅನ್ಯ ರಸ್ತೆಯ ಮೂಲಕ ತೆರಳುವಂತೆ ಸೂಚನೆ ನೀಡಲಾಗಿದೆ.
ಬೆಳಗಾವಿ ಜಿಲ್ಲೆಯ ಕಿತ್ತೂರು ಹಾಗೂ ಹುಕ್ಕೇರಿ ಪೊಲೀಸ್ ಇನ್ಸ್ ಪೆಕ್ಟರ್ ಗಳು ಖುದ್ದಾಗಿ ಹಿರೇಬಾಗೇವಾಡಿ ಹಾಗೂ ಹತ್ತರಗಿ ಟೋಲ್ ನಲ್ಲಿ ವಾಹನಗಳನ್ನ ತಡೆಯುವಂತೆ ಸೂಚನೆ ನೀಡಲಾಗಿದೆ.
