Latestರಾಜ್ಯಸುದ್ದಿ

ಮತ್ತೊಂದು ಬಿಎಂಟಿಸಿ ಬಸ್ ಧಗ ಧಗ , ನೋಡುತ್ತಿದ್ದಂತೆ ಹೊತ್ತಿ ಉರಿದ ಬಸ್

ಬೆಂಗಳೂರು: ಚಲಿಸುತ್ತಿದ್ದ ಬಿಎಂಟಿಸಿ ಬಸ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಬಸ್ ಸುಟ್ಟು ಕರಕಲಾಗಿರುವ ಘಟನೆ ಜಯನಗರದ ಮೊಟ್ರೋ ಸ್ಟೇಷನ್ ಹಿಂಭಾಗ ನಡೆದಿದೆ.

ಬಿಎಂಟಿಸಿ ಬಸ್ ಮೆಜೆಸ್ಟಿಕ್ ನಿಂದ ಜಯನಗರ ಕಡೆ ಹೋಗುತ್ತಿತ್ತು. ಈ ವೇಳೆ ಚಲಿಸುತ್ತಿದ್ದ ಬಿಎಂಟಿಸಿ ಬಸ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಇದ್ದಕ್ಕಿದ್ದಂತೆ ಬಸ್ ನಲ್ಲಿ ಶಬ್ಧ ಕೇಳಿ ಅನುಮಾನಗೊಂಡ ಚಾಲಕ ಬಸ್ ನಿಲ್ಲಿಸಿ ನೋಡುತ್ತಿದ್ದಂತೆ ಬಸ್ ನಲ್ಲಿ ಹೊಗೆಯಾಡಲು ಶುರುವಾಗಿದೆ.

ಕೂಡಲೇ ಕಂಡಕ್ಟರ್ ಗೆ ಹೇಳಿ ಪ್ರಯಾಣಿಕರನ್ನು ಕೆಳಗೆ ಇಳಿಸಿದ್ದಾರೆ. ಇದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ನಗರದಲ್ಲಿ ಕೆಲಕಾಲ ಟಾಫ್ರಿಕ್ ಸಮಸ್ಯೆ ಎದುರಾಯಿತು.

Spread the love

Related Articles

Leave a Reply

Your email address will not be published. Required fields are marked *

Back to top button