ಅಪ್ಪನ ಬಗ್ಗೆ ತುಟಿ ಬಿಚ್ಚಿದ ಅನುಶ್ರೀ ಆಡಿಯೋ ವೈರಲ್!

ನಟಿ ಅನುಶ್ರೀ ತಂದೆಯೆಂದು ಇದ್ದಕ್ಕಿದ್ದ ಹಾಗೆ ಪ್ರತ್ಯಕ್ಷನಾದ ವ್ಯಕ್ತಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ್ದಾರೆ. ಆಂಕರ್ ಅನುಶ್ರೀ ನನ್ನ ಮಗಳು, ಸಿಂಪಥಿ ಗಿಟ್ಟಿಸಿಕೊಂಡು ಮೇಲೆ ಬಂದಿದ್ದಾಳೆ. ಅವಳಿಗೆ ಒಳ್ಳೆಯದಾಗಲಿ ಎಂದಿದ್ದರು. ಜೊತೆಗೆ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದು ಕೊನೆಯ ಬಾರಿಯಾದರು ನನ್ನ ಮುಖ ನೋಡೋಕೆ ಬರಲಿ ಎಂದಿದ್ದರು. ಅನುಶ್ರೀ ತಂದೆ ಎಂದುಕೊಂಡು ಬಂದಿರುವ ಸಂಪತ್ ಅವರನ್ನು ಶಿವಲಿಂಗಯ್ಯ ಎನ್ನುವವರು ನೋಡಿಕೊಳ್ಳುತ್ತಿದ್ದಾರೆ. ಇದೀಗ ಅನುಶ್ರೀ ಶಿವಲಿಂಗಯ್ಯ ಅವರ ಜೊತೆ ಮಾತನಾಡಿರುವುದು ಎನ್ನಲಾದ ಆಡಿಯೋ ವೈರಲ್ ಆಗಿದೆ.
ಆಡಿಯೋದಲ್ಲಿ ಅನುಶ್ರೀ ಹಾಗೂ ಶಿವಲಿಂಗಯ್ಯ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಶಿವಲಿಂಗಯ್ಯ ಅವರು ಈ ಮೊದಲು ಅನುಶ್ರೀ ಅವರನ್ನು ಸಂಪರ್ಕಿಸೋಕೆ ಹಲವು ಬಾರಿ ಪ್ರಯತ್ನಿಸಿದ್ದಾರೆ. ಆದರೆ, ಅದು ಸಾಧ್ಯವಾಗಿಲ್ಲ ಎಂದಿದ್ದಾರೆ.
ಒಬ್ಬ ವ್ಯಕ್ತಿ ಮನೆಯಿಂದ 8 ವರ್ಷಕ್ಕಿಂತ ಹೆಚ್ಚು ದೂರವಿದ್ದರೆ ಆತನಿಗೂ ಆ ಕುಟುಂಬಕ್ಕೂ ಯಾವುದೇ ಸಂಬಂಧ ಇಲ್ಲ. ಆದರೆ ನನ್ನ ತಂದೆ ನಮ್ಮನ್ನು ಬಿಟ್ಟು ಹೋಗಿ 21 ವರ್ಷವಾಗಿದೆ. ಬೇರೆಯವರ ಪರ್ಸನಲ್ ಲೈಫ್ ಬಗ್ಗೆ ಮಾತನಾಡುವ ಅಧಿಕಾರ ಯಾರಿಗೂ ಇಲ್ಲ. ನೀವು ಹೇಗೆ ನನ್ನ ವಿಷಯದ ಬಗ್ಗೆ ಮಾದ್ಯಮಗಳ ಜೊತೆ ಮಾತನಾಡಿದ್ದೀರಿ ಎಂದು ಅನುಶ್ರೀ ಗರಂ ಆಗಿದ್ದಾರೆ.
