Latestಮನರಂಜನೆಸಿನಿಮಾ

ಪುನೀತ್ ರಾಜ್ ಕುಮಾರ್ ಮನೆಗೆ ಅಲ್ಲು ಅರ್ಜುನ್ ಭೇಟಿ

ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲ ಅಗಲಿ ಮೂರು ತಿಂಗಳು ಕಳೆದಿದೆ. ಅದರೂ ಕೂಡ ಅಪ್ಪು ಸಮಾಧಿಗೆ ಸಾವಿರಾರೂ ಸಂಖ್ಯೆ ಅಭಿಮಾನಿಗಳು ಭೇಟಿ ನೀಡುತ್ತಲೇ ಇದ್ದಾರೆ. ಈಗಾಗಲೇ ಅವರ ನೆನಪಿಗಾಗಿ ಸಾಕಷ್ಟು ಕಾರ್ಯಗಳು ನಡೆದಿದೆ.

ಇನ್ನು ಪುನೀತ್ ನಿಧನ ಬಳಿಕ ಅನೇಕ ಸೆಲೆಬ್ರಟಿಗಳು ಬಂದು ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಇದೀಗ ಟಾಲಿವುಡ್ ನಟ ಅಲ್ಲು ಅರ್ಜುನ್ ಕೂಡ ಇಂದು ಪುನೀತ್ ರಾಜ್ ಕುಮಾರ್ ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ಅಪ್ಪು ನಿಧನದಿಂದ ಕಣ್ಣೀರು ಹಾಕುತ್ತಿರುವ ಕುಟುಂಬದ ಸದಸ್ಯರಿಗೆ ಅವರು ಸಾಂತ್ವನ ಹೇಳಲಿದ್ದಾರೆ

ಅಲ್ಲು ಅರ್ಜುನ್​ ಅವರು ಇಂದು ಬೆಳಗ್ಗೆ 11 ಗಂಟೆಗೆ ಖಾಸಗಿ ವಿಮಾನದಲ್ಲಿ ಹೈದರಾಬಾದ್​ನಿಂದ ಹೊರಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಎಚ್​ಎಎಲ್​ ತಲುಪಲಿದ್ದಾರೆ. ಬಳಿಕ ಅವರು ನೇರವಾಗಿ ಪುನೀತ್​ ನಿವಾಸಕ್ಕೆ ಬರಲಿದ್ದಾರೆ. ನಂತರ ಅಪ್ಪು ಸಮಾಧಿಗೆ ಭೇಟಿ ನೀಡಿ, ನಮನ ಸಲ್ಲಿಸಲಿದ್ದಾರೆ.

ಅಂದಹಾಗೆ ಈ ಮೊದಲು ಪುಷ್ಪ ಸಿನಿಮಾ ಪ್ರಚಾರಕ್ಕೆ ಅಲ್ಲು ಅರ್ಜುನ್ ಬೆಂಗಳೂರಿಗೆ ಬಂದಾಗ ಅವರು ಪುನೀರ್ ರಾಜ್ ಕುಮಾರ್ ಮನೆಗೆ ಭೇಟಿ ನೀಡಿರಲಿಲ್ಲ. ಅದಕ್ಕೆ ಕಾರಣ ಕೂಡ ಇತ್ತು. ಪುಷ್ಪ ಸಿನಿಮಾ ಕೆಲಸಗಳಿಂದ ಬೆಂಗಳೂರಿಗೆ ಬರೋಕೆ ಆಗಿರಲಿಲ್ಲ. ಈಗ ಪುಷ್ಪ ಸಿನಿಮಾ ಪ್ರಮೋಷನ್​ಗೆ ಬೆಂಗಳೂರಿಗೆ ಬಂದಿದ್ದೇನೆ. ಈ ಸಂದರ್ಭದಲ್ಲಿ ನಾನು ಅಲ್ಲಿಗೆ ಹೋಗೋಕೆ ಇಷ್ಟಪಡುವುದಿಲ್ಲ. ಪುಷ್ಪ ರಿಲೀಸ್​ ಆದ ನಂತರ ಮತ್ತೊಮ್ಮೆ ಬೆಂಗಳೂರಿಗೆ ಬರುತ್ತೇನೆ. ಬಂದು ಇಡೀ ಕುಟುಂಬವನ್ನು ಭೇಟಿ ಆಗುತ್ತೇನೆ ಎಂದು ಈ ಹಿಂದೆ ಹೇಳಿದ್ದರು. ಇದೀಗ ಅವರು ಬೆಂಗಳೂರಿಗೆ ಆಗಮಿಸಲಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button