Latestಮನರಂಜನೆಸಿನಿಮಾ

ಆಲಿಯಾ ಭಟ್ ಈಗ ಗಂಗೂಬಾಯಿ ಕಾಠಿಯಾವಾಡಿ, ಫೆ. 25ಕ್ಕೆ ರಿಲೀಸ್

ಆಲಿಯಾ ಭಟ್ ಅವರು ಬಿಟೌನ್ ನಲ್ಲಿ ಪ್ರತಿಭಾವಂತ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಈಗ ಆರ್ ಆರ್ ಆರ್ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಸಿನಿಮಾ ರಿಲೀಸ್ ಆಗುತ್ತಿದೆ. ಅದರ ಜೊತೆಗೆ ನಟಿಸಿರುವಂತಹ ಬಾಲಿವುಡ್ ನ ಬಹು ನಿರೀಕ್ಷೆ ಚಿತ್ರ ಗಂಗೂಬಾಯಿ ಕಾಠಿಯಾವಾಡಿ ಕೂಡ ರಿಲೀಸ್ ಗೆ ರೆಡಿಯಾಗಿದೆ.

ಆ ಸಿನಿಮಾದಲ್ಲಿ ಅವರು ರಿಯಲ್ ಲೈಫ್ ನ ಪಾತ್ರವೊಂದನ್ನು ನಿಭಾಯಿಸುತ್ತಿದ್ದಾರೆ. ಇದೀಗ ಈ ಸಿನಿಮಾ ಇದೆ ತಿಂಗಳು 25ಕ್ಕೆ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಫೆಬ್ರವರಿ 4ಕ್ಕೆ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ನ್ಯೂ ಲುಕ್ ಪೊಸ್ಟರ್ ರಿಲೀಸ್ ಆಗಿದೆ.

ಆಲಿಯಾ ಭಟ್ ಶ್ವೇತವಸ್ತ್ರಧಾರಿಯಾಗಿ, ಹಣೆಗೆ ಕುಂಕುಮ ಧರಿಸಿದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ, ಗಂಗೂ ಬರುತ್ತಿದ್ದಾಳೆ ಎನ್ನುವ ಹೊಸ ಲುಕ್ ಹೊಂದಿರುವ ಆಲಿಯಾ ಹೊಸ ಆವತಾರಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಈ ಸಿನಿಮಾದಲ್ಲಿ ಅಜಯ್‌ ದೇವಗನ್‌ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಂಜಯ್‌ ಲೀಲಾ ಬನ್ಸಾಲಿ ಮತ್ತು ಡಾ.ಜಯಂತಿಲಾಲ್‌ ಗಾಡಾ ಚಿತ್ರವನ್ನು ನಿರ್ಮಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button