Latestಮನರಂಜನೆಸಿನಿಮಾಸೆಲೆಬ್ರಿಟಿ

ಹಿಂದೂ ಧರ್ಮಕ್ಕೆ ಮತಾಂತರಗೊಂಡ ಖ್ಯಾತ ನಿರ್ದೇಶಕ

ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ಅಲಿ ಅಕ್ಬರ್ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದು, ತಮ್ಮ ಹೆಸರನ್ನ ಬದಲಾವಣೆ ಮಾಡಿಕೊಂಡಿದ್ದಾರೆ. ಮತಾಂತರದ ಸಂದರ್ಭದಲ್ಲಿ ತೆಗೆದ ಕೆಲವೊಂದು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಪರ ವಿರೋಧ ಚರ್ಚೆಗಳು ಶುರುವಾಗಿದೆ.
ಜ.13ರಂದು ಅಲಿ ಅಕ್ಬರ್ ಅವರ ಮತಾಂತರ ನಡೆದಿದೆ ಅನ್ನೋ ಮಾತು ಕೇಳಿ ಬರ್ತಿದೆ. ಹಿಂದೂ ಸೇವಾ ಕೇಂದ್ರದ ಸ್ಥಾಪಕ ಪ್ರತೀಶ್ ವಿಶ್ವನಾಥ್ ಅವರು ತಮ್ಮ ಫೇಸ್​ ಬುಕ್ ಫೇಜ್​ನಲ್ಲಿ ಅಲಿ ಅಕ್ಬರ್ ಮತಾಂತರಗೊಂಡ ವಿಷಯವನ್ನ ಬರೆದುಕೊಂಡಿದ್ದಾರೆ. ಇತಿಹಾಸ ತಾನಾಗಿಯೇ ಮರುಕಳಿಸುತ್ತದೆ. ಅಲಿ ಅಕ್ಬರ್ ಈಗ ರಾಮಸಿಂಹನ್ ಎಂದು ಕ್ಯಾಪ್ಷನ್​ನಲ್ಲಿ ಬರೆದುಕೊಂಡಿದ್ದಾರೆ.
ಇಷ್ಟು ದಿನಗಳ ಕಾಲ ಅಲಿ ಅಕ್ಬರ್ ಆಗಿದ್ದ ನಿರ್ದೇಶಕರು ಮತಾಂತರಗೊಂಡ ಬಳಿಕ ರಾಮಸಿಂಹನ್ ಎಂದು ಹೆಸರು ಬದಲಾವಣೆ ಮಾಡಿಕೊಂಡಿದ್ದಾರೆ. ಮತಾಂತರದ ಸಂದರ್ಭದಲ್ಲಿ ಅಲಿ ಅಕ್ಬರ್, ಪತ್ನಿ ಜೊತೆ ಹೋಮ, ಹವನಗಳನ್ನ ಮಾಡಿದ್ದಾರೆ. ಅಲ್ಲದೆ ಮತಾಂತರದ ಬಳಿಕ ಪಡೆದುಕೊಂಡಿರೋ ಸರ್ಟಿಫಿಕೇಟ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮತಾಂತರಕ್ಕೆ ಕಾರಣವಾದ ಸೋಶಿಯಲ್ ಮೀಡಿಯಾ ಪೋಸ್ಟ್
ಇತ್ತೀಚೆಗೆ ಮಿಲಿಟರಿ ಅಧಿಕಾರಿ ಬಿಪಿನ್ ರಾವತ್ ನಿಧನ ಹೊಂದಿದ ಸಂದರ್ಭದಲ್ಲಿ ಅಲಿ ಅಕ್ಬರ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟಗಳನ್ನ ಹಂಚಿಕೊಂಡಿದ್ದರು. ಈ ವೇಳೆ ಅಲಿ ಅಕ್ಬರ್ ಪೋಸ್ಟರ್​ಗೆ ಕೆಲವು ಮುಸ್ಲಿಮರು ಖುಷಿಯ ಎಮೋಜಿಗಳ ಮೂಲಕ ಕಮೆಂಟ್ ಮಾಡಿದ್ದರು. ಇದರಿಂದ ಬೇಸರಗೊಂಡ ಅಲಿ ಅಕ್ಬರ್ ಈ ಮತಾಂತರದ ನಿರ್ಧಾರ ತೆಗೆದುಕೊಂಡಿದ್ದು ಮುಸ್ಲಿಂ ಧರ್ಮದಲ್ಲಿನ ನಂಬಿಕೆಗಳನ್ನ ಕೈ ಬಿಟ್ಟು ಹಿಂದೂ ಧರ್ಮಕ್ಕೆ ಮತಾಂತರವಾಗೋದಾಗಿ ತಿಳಿಸಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button