Latestಸಿನಿಮಾಸೆಲೆಬ್ರಿಟಿ
ಐಶ್ವರ್ಯಾ ರೈ ಅಲ್ಲ; ಈಕೆ ಆಶಿತಾ ಸಿಂಗ್

ಬೆಂಗಳೂರು: ನಟಿ ಐಶ್ವರ್ಯಾ ರೈ ಬಚ್ಚನ್ರಂತೆಯೇ ಕಾಣಿಸುವ ಹೊಸ ನಟಿಯರ ಒಂದು ಸಾಲೇ ಇದೆ. ಇದಕ್ಕೆ ಹೊಸ ಸೇರ್ಪಡೆ ಆಶಿತಾ ಸಿಂಗ್.
ಆಶಿತಾ ಸಿಂಗ್ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಲವು ವಿಡಿಯೋಗಳಿವೆ. ಆಕೆ ಅದರಲ್ಲಿ ಐಶ್ವರ್ಯಾ ರೈ ನಟನೆಯ ಚಿತ್ರದ ಡೈಲಾಗ್ಗಳಿಗೆ ಲಿಪ್ಸಿಂಕ್ ಮಾಡಿದ್ದಾರೆ. ಐಶ್ವರ್ಯಾ ರೈ ಅವರ ಈ ಡೂಪ್ಲಿಕೇಟ್ ಕೊಂಚವೂ ವ್ಯತ್ಯಾಸವಿಲ್ಲದಷ್ಟು ಮಟ್ಟಿಗೆ ಐಶ್ವರ್ಯಾರನ್ನು ಹೋಲುತ್ತಾರೆ.
ಐಶ್ವರ್ಯಾ ಅವರನ್ನು ಹೋಲುವ ಹಲವರ ಹೆಸರು ಈಗಾಗಲೇ ಸಿನಿಪ್ರಿಯರಿಗೆ ಪರಿಚಿತ. ಸ್ನೇಹಾ ಉಲ್ಲಾಳ್, ಮರಾಠಿ ನಟಿ ಮಾನಸಿ ನಾಯಕ್,ಪಾಕಿಸ್ತಾನಿ ವೈದ್ಯೆ ಆಮ್ನಾ ಇಮ್ರಾನ್ ಅವರು ಈ ಹಿಂದೆ ಐಶ್ವರ್ಯಾರನ್ನು ಹೋಲುವ ಮೂಲಕ ಸುದ್ದಿಯಲ್ಲಿದ್ದರು.




