Breaking NewsLatestವಿದೇಶ

ಅಫ್ಘಾನಿನಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳು; ಮಾನವೀಯ ಬಿಕ್ಕಟ್ಟು ಉಲ್ಬಣಿಸುವ ಆತಂಕ

ಕಾಬೂಲ್: ತಾಲಿಬಾನ್ ಪಾರುಪತ್ಯ ಮೆರೆದಿರುವ ಅಫ್ಘಾನಿನಲ್ಲಿ ಅಸಂಖ್ಯಾತ ಮಕ್ಕಳು ಅಪೌಷ್ಠಿಕತೆಯಿಂದ ಬಳಲತೊಡಗಿದ್ದಾರೆ. ಸುಮಾರು 10 ಮಿಲಿಯನ್ಗೂ ಅಧಿಕ ಮಕ್ಕಳು ಆಹಾರ, ಕುಡಿಯುವ ನೀರು, ಔಷಧಗಳ, ಮೂಲಭೂತ ಸೌಕರ್ಯಗಳ ಕೊರತೆಯಿಂದ ಎದುರಿಸುತ್ತ, ಅಪೌಷ್ಠಿಕತೆಗೆ ಒಳಗಾಗಿ ಆಸ್ಪತ್ರೆಯ ಹಾಸಿಗೆಗಳಲ್ಲೇ ದಿನಗಳೆಯುವಂತಹ ದುಸ್ಥಿತಿ ಎದುರಾಗಿದೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) ವರದಿ ಮಾಡಿದೆ.

ತೀವ್ರ ಬಡತನದಿಂದ ಆಹಾರಕ್ಕಾಗಿ ಅರಸಿ ಸ್ಥಳಾಂತರಗೊಂಡ ಜನರು ಅಲ್ಲಿನ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಅಂತರ್ ರಾಷ್ಟ್ರೀಯ ಸಮುದಾಯವು ಅಫ್ಘಾನ್ ಜನತೆ, ವಿಶೇಷವಾಗಿ ಮಕ್ಕಳ ಬಗ್ಗೆ ಗಮನ ಹರಿಸದಿದ್ದರೆ ಅಫ್ಘಾನಿನಲ್ಲಿ ಮಾನವೀಯ ಬಿಕ್ಕಟ್ಟು ತಲೆದೋರಬಹುದು ಎಂದು ಮಕ್ಕಳ ಹಕ್ಕುಗಳ ಕಾರ್ಯಕರ್ತೆ ಝಾರ್ಖಾ ಯಫ್ತಾಲಿ ಆತಂಕ ವ್ಯಕ್ತಪಡಿಸಿದ್ದಾರೆ.

ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ತಕ್ಷಣ ಮಾನವೀಯ ನೆರವಿನ ಅವಶ್ಯಕತೆಯಿದೆ. ಭೀಕರ ಬರಗಾಲದಿಂದ ಕುಡಿಯುವ ನೀರು ಸಿಗದೆ ತೀವ್ರ ಸಂಕಷ್ಟ ಎದುರಾಗಿದೆ. ಇನ್ನೊಂದೆಡೆ ಕೋವಿಡ್ ಸೋಂಕು ತಡೆಯಲು ಅತ್ಯಗತ್ಯವಾಗಿರುವ ಲಸಿಕೆ ಪಡೆಯದ ಮಕ್ಕಳಿದ್ದಾರೆ. ಎಂದು ಯುನಿಸೆಫ್ ಸಂಸ್ಥೆಯ ಸ್ಯಾಮ್ ಮೋರ್ಟ್ ತಿಳಿಸಿದ್ದಾರೆ.

ಪರಿಸ್ಥಿತಿ ಹೀಗೇ ಮುಂದುವರಿದಲ್ಲಿ ಆ ದೇಶದ 5 ವರ್ಷದೊಳಗಿನ 1 ಮಿಲಿಯನ್ ಮಕ್ಕಳು ತೀವ್ರ ಅಪೌಷ್ಠಿಕತೆಯಿಂದ ಬಳಲಬಹುದು ಎಂದು ಅಲ್ಲಿನ ವೈದ್ಯರು ಎಚ್ಚರಿಸಿದ್ದಾರೆ. ಕಳೆದ ತಿಂಗಳಿನಿಂದ ಆಸ್ಪತ್ರೆಗೆ ಭೇಟಿ ನೀಡುವ ರೋಗಿಗಳ ಸಂಖ್ಯೆ ಹೆಚ್ಚಳವಾಗಿದೆ ಎಂದು ಕಾಬೂಲ್ನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ಮುಖ್ಯಸ್ಥ ಮುಹಮ್ಮದ್ ಲತೀಫ್ ಬಶೀರ್ ತಿಳಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button