ಚೇತನ್ ಬಗ್ಗೆ ಚಿಂತೆ ಮಾಡಬೇಡಿ ಎಂದು ಚೇತನ್ ಪತ್ನಿ ಮೇಘಾ
ನ್ಯಾಯಾಂಗ ನಿಂಧನೆ ಆರೋಪದಡಿ ಬಂಧನಕೊಳ್ಳಗಾಗಿರುವ ನಟ ಚೇತನ್ರನ್ನ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಚೇತನ್ ಪರವಾಗಿ ಅನೇಕರು ಧ್ವನಿ ಎತ್ತಿದ್ದಾರೆ. ಚೇತನ್ಗೆ ಜಾಮೀನು ಕೊಡಿಸಲು ಚೇತನ್ ಪತ್ನಿ ಮೇಘಾ ಪ್ರಯತ್ನಿಸುತ್ತಿದ್ದಾರೆ. ಪತಿಯ ಬಂಧನದ ಬಳಿಕ ಪ್ರತಿಕ್ರಿಯೆ ನೀಡಿದ ಮೇಘಾ ಯಾರು ಚಿಂತೆ ಮಾಡಬೇಡಿ ಎಂದಿದ್ದಾರೆ.
ಚೇತನ್ ತುಂಬ ಚೆನ್ನಾಗಿ ಇದ್ದಾರೆ. ಯಾರೂ ಚಿಂತೆ ಮಾಡಬೇಡಿ. ಅವರು ಧೈರ್ಯವಾಗಿದ್ದಾರೆ. ಈ ಘಟನೆಯಿಂದ ಅವರಿಗೆ ಏನೂ ತೊಂದರೆ ಆಗುವುದಿಲ್ಲ. ಅವರು ಆತಂಕಕ್ಕೆ ಒಳಗಾಗಿಲ್ಲ. ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ಜನರು ನನಗೆ ಕರೆ ಮಾಡಿ ವಿಚಾರಿಸುತ್ತಿದ್ದಾರೆ. ಎಲ್ಲರೂ ಬೆಂಬಲ ನೀಡುತ್ತಿದ್ದಾರೆ. ನಮ್ಮ ವಕೀಲರ ತಂಡ ಇದೆ. ಎಲ್ಲರೂ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ನಾವು ಕಾನೂನಿನ ಮೂಲಕ ಹೋರಾಟ ಮಾಡುತ್ತೇವೆ ಎಂದಿದ್ದಾರೆ.
ಹಿಜಾಬ್ ಕುರಿತಾಗಿ ನಟ ಚೇತನ್ ನೀಡಿದ ಹೇಳಿಕೆಯಿಂದಾಗಿ ಚೇತನ್ ಅವರನ್ನ ಬಂಧಿಸಲಾಗಿದೆ. ಫೆ.16ರಂದು ನಟ ಚೇತನ್ ಹಿಜಾಬ್ ವಿಚಾರದಲ್ಲಿ ಕೋರ್ಟ್ನಲ್ಲಿ ನಡೆಯುತ್ತಿರುವ ವಿಚಾರಣೆಯ ಕುರಿತಾಗಿ ಟ್ವೀಟ್ ಮಾಡಿ ನ್ಯಾ.ಕೃಷ್ಣ ದೀಕ್ಷಿತ್ ಅವರನ್ನು ನಿಂದಿಸಿದ್ದರು. ಜೊತೆಗೆ ಕಳೆದ ಎರಡು ವರ್ಷದ ಹಿಂದಿನ ತಾವು ಮಾಡಿದ್ದ ಟ್ವೀಟ್ ಅನ್ನು ರೀಟ್ವೀಟ್ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ವಿಚಾರಣೆ ನಡೆಯುವ ಸಂದರ್ಭದಲ್ಲಿ ಜಡ್ಜ್ ಅವರನ್ನು ನಿಂದಿಸುವುದು ಅಪರಾಧ. ಈ ಕಾರಣಕ್ಕೆ ಪೊಲೀಸರು ಚೇತನ್ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಿಸಿಕೊಂಡು ಅರೆಸ್ಟ್ ಮಾಡಿದ್ದಾರೆ. ಚೇತನ್ರಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ 8ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.
