Latestಜಿಲ್ಲಾ ಸುದ್ದಿಮೈಸೂರು

ಪತ್ನಿ ಚುಡಾಯಿಸಿದ್ದಕ್ಕೆ ಇಬ್ಬರನ್ನು ಕೊಲೆ ಮಾಡಿದ ಗಂಡ

ಮೈಸೂರು: ಪತ್ನಿಯನ್ನ ಆಗಾಗ್ಗೆ ಚುಡಾಯಿಸುತ್ತಿದ್ದ ಸ್ನೇಹಿತನನ್ನ ಎಣ್ಣೆ ಪಾರ್ಟಿಯಲ್ಲಿ ಕೊಚ್ಚಿ‌‌ ಕೊಂದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ನಗರದ ಬೋಗಾದಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಸ್ನೇಹಿತನಿಗೆ ಸಹಾಯ ಮಾಡಿದ್ದ ಮತ್ತೊಬ್ಬ ಗೆಳೆಯನೂ ಹತ್ಯೆಯಾಗಿದ್ದಾನೆ. ಹೆಚ್.ಡಿ.ಕೋಟೆ ತಾಲೂಕಿನ ಕೊತ್ತೆಗಾಲ ಗ್ರಾಮದ ರವಿ ಹಾಗೂ ಬಸವ ಕೊಲೆಯಾದವರು. ಹತ್ಯೆಗೈದ ಆರೋಪಿ ಮಹೇಶ್ ಹಾಗೂ ಕೊಲೆಗೆ ಸಹಕರಿಸಿದ ಮತ್ತೊಬ್ಬ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ.

ಬೋಗಾದಿ ಮುಖ್ಯ ರಸ್ತೆಯಲ್ಲಿ ನಾಲ್ವರು ಸ್ನೇಹಿಯರು ಎಣ್ಣೆ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಮಹೇಶ್ ಪತ್ನಿಯನ್ನ ಆಗಾಗ್ಗೆ ಚುಡಾಯಿಸುತ್ತಿದ್ದ ವಿಚಾರ ಪ್ರಸ್ತಾಪವಾಗಿ ಸ್ನೇಹಿತರ ನಡುವೆ ಗಲಾಟೆಯಾಗಿದೆ. ಈ ಸಂದರ್ಭ ಮಹೇಶ್ ಪಿಕಾಸಿಯಿಂದ ರವಿ ತಲೆಗೆ ಹೊಡೆದು ಕೊಂದಿದ್ದಾನೆ. ಈ ವೇಳೆ ಸ್ನೇಹಿತನ ಬೆಂಬಲಕ್ಕೆ ಬಂದ ಮತ್ತೊಬ್ಬ ಸ್ನೇಹಿತ ಬಸವ ಕೂಡ ಕೊಲೆಯಾಗಿದ್ದಾನೆ ಎಂದು ತಿಳಿದು ಬಂದಿದೆ. ಘಟನೆ ಸಂಭಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button