Breaking NewsLatestಕ್ರೈಂವಿದೇಶಸುದ್ದಿ
ಅತ್ಯಾಚಾರವೆಸಗಲು ಯತ್ನಿಸಿ ಬಾಲಕಿಯ ಕೊಲೆ ಮಾಡಿದ ಪ್ರಕರಣ: 14 ವರ್ಷದ ಬಾಲಕ ತಪ್ಪಿತಸ್ಥ ಎಂದು ಸಾಬೀತು

ಅಮೆರಿಕಾ: ಅತ್ಯಾಚಾರವೆಸಗಲು ಯತ್ನಿಸಿ ಬಾಲಕಿಯ ಕೊಲೆ ಮಾಡಿದ ಪ್ರಕರಣದಲ್ಲಿ 14 ವರ್ಷದ ಬಾಲಕ ತಪ್ಪಿತಸ್ಥ ಎಂದು ಸಾಬೀತಾಗಿದೆ. ಅಮೆರಿಕಾದ ಚಿಪ್ಪೆವಾ ಕೌಂಟಿಯಲ್ಲಿ ಈ ಭಯಾನಕ ಘಟನೆ ನಡೆದಿದೆ. ಇಲಿಯಾನಾ ಲಿಲಿ ಪೀಟರ್ಸ್ ಎಂಬ 10 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ 14 ವರ್ಷದ ಬಾಲಕ ಕೊಲೆ ಮಾಡಿದ್ದ.
ಸದ್ಯ ಆರೋಪಿಯನ್ನು ಬಂಧಿಸಿ ಚಿಪ್ಪೆವಾ ಕೌಂಟಿಯಲ್ಲಿ ನರಹತ್ಯೆ ಮತ್ತು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಲಾಗಿದೆ.
ಸಂತ್ರಸ್ತೆ ಮನೆಯಿಂದ ಹೊರಬಂದ ವೇಳೆ ಆರೋಪಿಯು ಅತ್ಯಾಚಾರವೆಸಗಿ ಆಕೆಯನ್ನು ಕೊಲ್ಲಲು ಯೋಜನೆ ರೂಪಿಸಿದ್ದ ಎಂದು ವಿಸ್ಕಾನ್ಸಿನ್ ಕೌಂಟಿಯ ಅಟಾರ್ನಿ ವೇಡ್ ನೆವೆಲ್ ಹೇಳಿದ್ದಾರೆ. 10 ವರ್ಷದ ಬಾಲಕಿಯ ಹೊಟ್ಟೆಗೆ ಹೊಡೆದ ಆರೋಪಿ, ಆಕೆಯನ್ನು ನೆಲಕ್ಕೆ ಬೀಳಿಸಿದ್ದಾನೆ. ನಂತರ ಆಕೆಯ ಕತ್ತು ಹಿಸುಕುವ ಮೊದಲು ಕೋಲಿನಿಂದ ಹೊಡೆದಿದ್ದಾನೆ. ನಂತರ ಆಕೆಯ ಮೇಲೆ ಲೈಂಗಿಕವಾಗಿ ಆಕ್ರಮಣ ನಡೆಸಿದ್ದಾನೆ ಎನ್ನಲ್ಲಾಗಿದೆ.
