Breaking NewsLatestರಾಷ್ಟ್ರೀಯಸುದ್ದಿ
ಜೆಸಿಬಿ ಟಯರ್ ಸ್ಪೋಟಗೊಂಡು ಇಬ್ಬರು ಸಾವು

ಛತ್ತೀಸ್‌ಗಢ : ಛತ್ತೀಸ್‌ಗಢದ ರಾಯ್‌ಪುರ ಜಿಲ್ಲೆಯಲ್ಲಿ ಜೆಸಿಬಿ ಟಯರ್‌ಗೆ ಗಾಳಿ ತುಂಬುತ್ತಿದ್ದಾಗ ಟಯರ್ ಸ್ಫೋಟಗೊಂಡು ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ಮೃತರನ್ನು ಮಧ್ಯಪ್ರದೇಶದ ರೇವಾ ಜಿಲ್ಲೆಯ ವಿವಾಸಿಗಳು ಎಂದು ಗುರುತಸಲಾಗಿದೆ. ಛತ್ತೀಸ್‌ಗಢದ ರಾಯ್‌ಪುರ ಜಿಲ್ಲೆಯ ಲ್ತಾರಾ ಇಂಡಸ್ಟ್ರಿಯಲ್ ಏರಿಯಾದ ವಾಹನ ವರ್ಕ್‌ಶಾಪ್‌ನಲ್ಲಿ ವ್ಯಕ್ತಿಗಳಿಬ್ಬರು ಜೆಸಿಬಿ ಟಯರ್‌ಗೆ ಗಾಳಿ ತುಂಬಿಸುತ್ತಿದ್ದರು.
ಓರ್ವ ಗಾಳಿ ತುಂಬಿಸಿದ ಬಳಿಕ ಇನ್ನೋರ್ವ ಗಾಳಿಯ ಪ್ರಮಾಣ ಪರೀಕ್ಷಿಸಲು ಟಯರ್ ಮೇಲೆ ಒತ್ತಿದ್ದಾನೆ. ಈ ವೇಳೆ ಒಮ್ಮಿಂದೊಮ್ಮೆಲೆ ಟಯರ್ ಸ್ಪೋಟಗೊಂಡಿದೆ. ಸ್ಪೋಟದ ತೀವ್ರತೆಗೆ ಇಬ್ಬರು ವ್ಯಕ್ತಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸ್ಪೋಟದ ಭಯಾನಕತೆಯನ್ನು ತೋರಿಸುತ್ತದೆ.
