Breaking NewsLatestರಾಷ್ಟ್ರೀಯಸುದ್ದಿ
ಪಕ್ಷದ 20-30 ಶಾಸಕರನ್ನು ಖರೀದಿಸುವ ಮೂಲಕ ತಮ್ಮ ಸರ್ಕಾರ ಬುಡಮೇಲುಗೊಳಿಸಲು ಬಿಜೆಪಿ ಪ್ರಯತ್ನ: ಕೆ.ಚಂದ್ರಶೇಖರ ರಾವ್

ಹೈದರಾಬಾದ್: ತೆಲಂಗಾಣದಲ್ಲಿ ಟಿಆರ್‌ಎಸ್ (TRS) ಪಕ್ಷದ 20-30 ಶಾಸಕರನ್ನು ಖರೀದಿಸುವ ಮೂಲಕ ತಮ್ಮ ಸರ್ಕಾರ ಬುಡಮೇಲುಗೊಳಿಸಲು ಬಿಜೆಪಿ ಪ್ರಯತ್ನ ನಡೆಸುತ್ತಿದೆ ಎಂದು ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್ ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ timesofindia.com ವರದಿ ಮಾಡಿದೆ. ಮುನುಗೋಡೆ ಉಪಚುನಾವಣೆ ಪ್ರಚಾರ ರ‍್ಯಾಲಿಯಲ್ಲಿ ಮಾತನಾಡಿದ ಅವರು, ದೆಹಲಿಯಿಂದ ಆಗಮಿಸಿದ ದಲ್ಲಾಳಿಗಳು ಶಾಸಕರಿಗೆ ತಲಾ 100 ಕೋಟಿಯ ಲಂಚ ಆಮಿಷ ಒಡ್ಡಿದ್ದಾರೆ ಎಂದು ಆಪಾದಿಸಿದರು. ಆದರೆ ಮಣ್ಣಿನ ಮಕ್ಕಳಾದ ಶಾಸಕರು ಇದನ್ನು ತಿರಸ್ಕರಿಸಿದ್ದಾರೆ ಎಂದು ಶ್ಲಾಘಿಸಿದರು.
ಆದರೆ ಬಿಜೆಪಿ ಈ ಆರೋಪವನ್ನು ಅಲ್ಲಗಳೆದಿದ್ದು, ಶಾಸಕರು 100 ಕೋಟಿಗೆ ಅರ್ಹರಲ್ಲ; ಸರ್ಕಾರವನ್ನು ಬುಡಮೇಲುಗೊಳಿಸುವ ಯಾವುದೇ ಪ್ರಯತ್ನ ಇಲ್ಲ ಎಂದು ಹೇಳಿದೆ.
“ಕೆಸಿಆರ್ ದೊಡ್ಡದಾಗಿ ಧ್ವನಿ ಎತ್ತುತ್ತಾರೆ ಎಂದು ಬಿಜೆಪಿ ಭಾವಿಸಿದ್ದು, ಅವರ ರಾಜಕೀಯ ಅಂತ್ಯಕ್ಕೆ ಹುನ್ನಾರ ನಡೆಸಿದೆ. 20-30 ಶಾಸಕರನ್ನು ಖರೀದಿಸುವ ಮೂಲಕ ಸರ್ಕಾರವನ್ನು ಪತನಗೊಳಿಸಲು ಯತ್ನಿಸುತ್ತಿದೆ” ಎಂದು ದೂರಿದರು.
